ಇಳಕಲ್ಲ(ಗ್ರಾ):ನಗರದ ಅಲಂಪುರ ಪೇಟೆಯ ಕೆಂಚಮ್ಮದೇವಿ ದೇವಸ್ಥಾನದ ದೇವಿ ಪಲ್ಲಕ್ಕಿ ಉತ್ಸವ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಮಗಾರ ಹರಳಯ್ಯ ಸಮಾಜದ ಮಹಿಳೆಯರು ಕುಂಭ ಮೆರವಣಿಗೆ ನಡೆಸಿದರು.
ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ವಾಲ್ಮೀಕಿ ಮಂದಿರ, ಗೊರಬಾಳ ನಾಕಾ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ದೇವಸ್ಥಾನ ತಲುಪಿತು. ನಂತರ ಮಹಾಪೂಜೆ, ಅನ್ನಪ್ರಸಾದ ನಡೆಯಿತು.
ಮೆರವಣಿಗೆ ನೇತೃತ್ವವನ್ನು ಸಮಾಜದ ಅಧ್ಯಕ್ಷ ಪರಶುರಾಮ ಮಬ್ರೂಮಕರ, ನಗರಸಭೆ ನಾಮನಿರ್ದೇಶಿತ ಸದಸ್ಯ ಯಲ್ಲಪ್ಪ ರಾಜಾಪುರ, ಸುನೀಲ ಬಾಲಾಗಾವಿ, ಸುರೇಶ ಬಾಲಗಾವಿ, ಪರಶುರಾಮ ಬಾಲಗಾವಿ, ಸುರೇಶ್ ಭೂತ್ನಾಳ, ಮಬ್ರೂಮಕರ, ಪರಶುರಾಮ ಹೊಸಮನಿ, ಚನ್ನಬಸಪ್ಪ ವಿಜಾಪುರ, ಭರತ್ ಬೆಂಡಿಗೇರಿ, ಶಿವರಾಜ್ ವಿಜಾಪುರ ಮತ್ತಿತರರು ವಹಿಸಿದ್ದರು.