ಕುಂಚನೂರು ವಲಯ ಮಟ್ಟದ ಪ್ರೌಢಶಾಲೆಗಳ 17ರ ವಯೋಮಾನದ ಒಳಗಿನ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಕುಂಬಾರಹಳ್ಳ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ತಂಡದ ಜತೆಗೆ ಶಿಕ್ಷಕ ಸಿಬ್ಬಂದಿ ಇದ್ದಾರೆ. 
ಜಿಲ್ಲೆ

ಕುಂಬಾರಹಳ್ಳ ಶಾಲೆ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

ದತ್ತಾತ್ರೇಯ ಪಿ ಕುಲಕರ್ಣಿ

ಚಿಕ್ಕಪಡಸಲಗಿ: ಕುಂಚನೂರು ವಲಯ ಮಟ್ಟದ ಪ್ರೌಢಶಾಲೆಗಳ 17ರ ವಯೋಮಾನದ ಒಳಗಿನ ಕ್ರೀಡಾಕೂಟದಲ್ಲಿ ಸಮೀಪದ ಕುಂಬಾರಹಳ್ಳ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ. ಥ್ರೋಬಾಲ್ನಲ್ಲಿ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದಿದೆ ಎಂದು ಮುಖ್ಯಶಿಕ್ಷಕ ನಾರಾಯಣ ಶಾಸ್ತ್ರಿ ಹೇಳಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ, ದೈಹಿಕ ಶಿಕ್ಷಣ ಶಿಕ್ಷಕ ಬಾಹುಬಲಿ ಮುತ್ತೂರ, ತಂಡದ ವ್ಯವಸ್ಥಾಪಕ ಸಂಗಮೇಶ ಉಟಗಿ, ಶಿಕ್ಷಕರಾದ ಸಂಜೀವ್ ಝಾಂಬೂರೆ, ಚಂದ್ರಕಾಂತ ಪೊಲೀಸ್, ಶಾರದಾ ಮಠ, ಸವಿತಾ ಬೆನಕಟ್ಟಿ, ಆಶಿಫಾ ಭಾನು ಮೋಮಿನ, ಶಕುಂತಲಾ ಬಿರಾದಾರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.