ಜಿಲ್ಲೆ

ವಿಜೃಂಭಣೆಯ ಹನುಮಂತ ದೇವರ ಕುಂಬಾಭಿಷೇಕ

ಮದ್ದೂರು: ತಾಲೂಕಿನ ಬೆಸಗರಹಳ್ಳಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಹನುಮಂತ ದೇವಸ್ಥಾನದಲ್ಲಿ, ಜೀರ್ಣೋದ್ಧಾರಗೊಂಡ ಶ್ರೀ ಹನುಮಂತ ದೇವರ ಕುಂಬಾಭಿಷೇಕದ ಧಾರ್ಮಿಕ ವಿಧಿವಿಧಾನಗಳು ಅದ್ದೂರಿಯಾಗಿ ನೆರವೇರಿದವು.

ಶನಿವಾರ ಸುಪ್ರಭಾತ ಸೇವೆ, ವೇದಘೋಷ, ಮಹಾಭಿಷೇಕ, ಆರಾಧನೆ, ಸಂಕಲ್ಪ ವಾಸುದೇವ, ಪುಣ್ಯಾಹ, ನವಗ್ರಹ ಪೂಜೆ, ಅಷ್ಟೋತ್ತರ, ಕಳಸಾರಾಧನೆ, ಪ್ರಧಾನ ಕಳಸಾರಾಧನೆ, ಅಗ್ನಿ ಪ್ರತಿಷ್ಠೆ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ಜ.26ರ ಶುಕ್ರವಾರ ಸಂಜೆ 6 ಗಂಟೆಯಿಂದ ಗಂಗಾಪೂಜೆ, ಮೃತಿಕ ಸಂಗ್ರಹಣೆ, ಆಲಯ ಪ್ರವೇಶ, ದೇವತಾ ಪ್ರಾರ್ಥನೆ, ಮಹಾಸಂಕಲ್ಪ, ವಾಸುದೇವ, ಪುಣ್ಯಹ, ರಕ್ಷಾಬಂಧನ, ಅಂಕುರಾರ್ಪಣೆ, ಧ್ವಜಾರೋಹಣ, ಅಗ್ನಿ ಪ್ರತಿಷ್ಠೆ, ವಾಸ್ತು ಹೋಮ, ರಾಕ್ಷಾಜ್ಞ ಹೋಮ, ಲಘು ಪೂರ್ಣಾವತಿ, ಪಂಚಗವ್ಯ ಸಂಪನ್ನ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ಜ.28ರ ಬೆಳಗ್ಗೆ 6 ಗಂಟೆಗೆ ಸುಪ್ರಭಾತ ಸೇವೆ, ವೇದಘೋಷ, ಮಹಾಭಿಷೇಕ, ಗೋಪುರ ಕಳಸ ಸ್ಥಾಪನೆ, ಕುಂಬಾಭಿಷೇಕ, ಪುಷ್ಪಲಂಕಾರ, ಚೆಂದನ ನೇತ್ರೋಮಿಲನ, ಪ್ರಾಣ ಪ್ರತಿಷ್ಠಾಪನೆ, ಅಷ್ಟಾವಧಾನ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಮಧ್ಯಾಹ್ನ 12 ಗಂಟೆಯಿಂದ 5 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

ಅರ್ಚಕ ಬಿ.ಆರ್. ಪ್ರಸನ್ನ ಪೂಜಾ ಕೈಂಕರ್ಯ ನೆರವೇರಿಸಿದರು.