ಜಿಲ್ಲೆ

ಪಂ. ಕುಮಾರ ಗಂಧರ್ವ ಜನ್ಮಶತಾಬ್ದಿ ಸಂಗೀತೋತ್ಸವ, ಹುಬ್ಬಳ್ಳಿಯಲ್ಲಿ ಮೂರು ದಿನ ನಾದಲಹರಿ

Dharwada - Basavaraj Idli

ಹುಬ್ಬಳ್ಳಿ: ಪದ್ಮವಿಭೂಷಣ ಪಂ. ಕುಮಾರ ಗಂಧರ್ವರ ಜನ್ಮಶತಾಬ್ದಿ ಅಂಗವಾಗಿ ಧಾರವಾಡದ ಜಿ.ಬಿ. ಜೋಶಿ ಸ್ಮಾರಕ ಟ್ರಸ್ಟ್, ಕ್ಷಮತಾ ಸೇವಾ ಸಂಸ್ಥೆ ಸಹಯೋಗ ಹಾಗೂ ಕೇಂದ್ರ ಸರ್ಕಾರದ ಸಂಸತಿ ಮಂತ್ರಾಲಯ, ಭಾರತೀಯ ಜೀವ ವಿಮಾ ನಿಗಮದ ಪ್ರಾಯೋಜಕತ್ವದಲ್ಲಿ ನಾದಲಹರಿ ಸಂಗೀತೋತ್ಸವವನ್ನು ಫೆ. 23ರಿಂದ ಮೂರು ದಿನಗಳವರೆಗೆ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ಏರ್ಪಡಿಸಲಾಗಿದೆ ಎಂದು ಕ್ಷಮತಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಿಂದ ಗಾಯನ ವಾದನಗಳ ನಿನಾದ ಹೊರಹೊಮ್ಮಲಿದೆ. ಹಿರಿಯ ಕಲಾವಿದರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.

ಫೆ. 23ರಂದು ಸಂಜೆ 5.30ಕ್ಕೆ ಸಂಗೀತೋತ್ಸವ ಉದ್ಘಾಟನೆ ನಡೆಯಲಿದ್ದು, ಅತಿಥಿಗಳಾಗಿ ಎಲ್ಐಸಿ ದಣ ಮಧ್ಯ ವಿಭಾಗದ ವಲಯ ಪ್ರಬಂಧಕ ಎಲ್.ಕೆ. ಶ್ಯಾಮಸುಂದರ, ಪದ್ಮಶ್ರೀ ಡಾ. ಎಂ.ಎಂ. ಜೋಶಿ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸಂಜೆ 6.30ಕ್ಕೆ ಜೈಪುರ ಅತ್ರೌಲಿ ರಾಣೆಯ ಪ್ರತಿಭಾವಂತ ಗಾಯಕಿ ಪುಣೆಯ ಯಶಸ್ವಿ ಸರಪೋತದಾರ ಅವರ ಗಾಯನ ನಡೆಯಲಿದೆ. ರಾತ್ರಿ 8ಕ್ಕೆ ಕಿರಾಣಾ ರಾಣೆಯ ಪ್ರಬುದ್ಧ ಪ್ರತಿಭೆ ಹುಬ್ಬಳ್ಳಿಯ ಪಂ. ಜಯತೀರ್ಥ ಮೇವುಂಡಿ ಗಂಧರ್ವಗಾನ ಹರಿಯಲಿದೆ.

ಫೆ. 24ರಂದು ಸಂಜೆ 5.30ಕ್ಕೆ ಕಿರಾಣಾ ರಾಣೆಯ ಕೋಲ್ಕತ್ತಾದ ವಿದುಷಿ ಮನಾಲಿ ಬೋಸೆ, 7ಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದೆ ವಿದುಷಿ ಕಲಾ ರಾಮನಾಥ ಅವರ ವಾಯಲಿನ್ ನಡೆಯಲಿದೆ.

ಫೆ. 25ರಂದು ಸಂಜೆ 5.30ಕ್ಕೆ ಸಂಗೀತೋತ್ಸವ ಸಮಾರೋಪದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಎಲ್ಐಸಿ ಧಾರವಾಡ ಹಿರಿಯ ವಿಭಾಗೀಯ ಪ್ರಬಂಧಕ ಕೆ. ವೆಂಕಟರಮಣ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಂಜೆ 7ಕ್ಕೆ ದೆಹಲಿಯ ಲಕ್ಷ$್ಯ ಮೋಹನ ಹಾಗೂ ಆಯುಷ ಮೋಹನ ಸಹೋದರರ ಸಿತಾರ ಸರೋದ ವಾದನಗಳ ಜುಗಲ್ ಬಂದಿ ನಡೆಯಲಿದೆ.

ಸಹಕಲಾವಿದರಾಗಿ ಪಂ. ರಾಜೇಂದ್ರ ನಾಕೋಡ, ಡಾ. ರವಿಕಿರಣ ನಾಕೋಡ, ಪಂ. ಭೂಷಣ ಪರಚುರೆ, ಮಯಾಂಕ ಬೇಡೆಕರ, ರೂಪಕ ಕಲ್ಲೂರಕರ ತಬಲಾ ಸಾಥ್ ನೀಡಲಿದ್ದು, ಡಾ. ರವೀಂದ್ರ ಕಾತೋಟಿ, ಸತೀಶ ಭಟ್ಟ ಹೆಗ್ಗಾರ ಸಂವಾದಿನಿಯೊಂದಿಗೆ ಪಾಲ್ಗೊಳ್ಳುವರು.

ಕರಿನೀರ ವೀರ: ಕ್ಷಮತಾ ಸೇವಾ ಸಂಸ್ಥೆ, ಕೊಡಗಿನ ರಂಗಭೂಮಿ ಟ್ರಸ್ಟ್ ಇವರ ಸಹಯೋಗದಲ್ಲಿ ಕರಿನೀರ ವೀರ ನಾಟಕ ಪ್ರದರ್ಶನವನ್ನು ೆ. 24ರಂದು ಸಂಜೆ 5ಕ್ಕೆ ಧಾರವಾಡದ ಸನ್ನಿಧಿ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ.

ವೀರ ಸಾವರಕರ ಬಗ್ಗೆ ಹರಡಿರುವ ತಪು$್ಪ ಕಲ್ಪನೆಗಳನ್ನು ಹೋಗಲಾಡಿಸುವ ದಿಸೆಯಲ್ಲಿ ಅಡ್ಡಂಡ ಕಾರ್ಯಪ್ಪ ಅವರು ರಚಿಸಿ ನಿರ್ದೇಶನ ಮಾಡಿರುವ ನಾಟಕವನ್ನು ೆ. 25ರಂದು ಅಳ್ನಾವರ, 27ರಂದು ಕಲಟಗಿ, 29ರಂದು ಶಿಗ್ಗಾಂವಿಯ ಬೊಮ್ಮಾಯಿ ನಿವಾಸ, ಮಾರ್ಚ್ 2ರಂದು ಹುಬ್ಬಳ್ಳಿಯ ಗೋಕುಲ ಗಾರ್ಡನ್, ಮಾ. 3ರಂದು ಕುಂದಗೋಳ ಸವಾಯಿ ಗಂಧರ್ವ ಸಭಾಭವನ, ಮಾ. 5ರಂದು ಅಣ್ಣಿಗೇರಿಯ ಪಂಪ ಭವನದಲ್ಲಿ ಪ್ರದರ್ಶನ ನಡೆಯಲಿದೆ ಎಂದು ಗೋವಿಂದ ಜೋಶಿ ಮಾಹಿತಿ ನೀಡಿದರು.

ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮುರಳಿಧರ ಮಳಗಿ, ಸಮೀರ ಜೋಶಿ, ಗೋಷ್ಠಿಯಲ್ಲಿದ್ದರು.