ಕೊಕ್ಕರ್ಣೆ: ಕಳ್ತೂರು ಸಂತೆಕಟ್ಟೆ ಗೆಳೆಯರ ಬಳಗ ಕ್ರೀಡಾ ಸಂಘದ 6ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಕಳ್ತೂರು ಬುಕ್ಕಿಗುಡ್ಡೆ ಕೊರಗರ ಹಾಡಿಯಲ್ಲಿ ಇತ್ತೀಚೆಗೆ ಜರುಗಿತು.
ಕಳ್ತೂರು ಗ್ರಾಪಂ ಅಧ್ಯಕ್ಷ ನವೀನ್ ಪೂಜಾರಿ ಉದ್ಘಾಟಿಸಿದರು. ಗೆಳೆಯರ ಬಳಗ ಕ್ರೀಡಾ ಸಂಘ ಅಧ್ಯಕ್ಷ ಚಂದ್ರ ಕಳ್ತೂರು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯಶ್‌ಪಾಲ್ ಸುವರ್ಣ ಶುಭಹಾರೈಸಿದರು.
ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ಕೊರಗರ ಆರೋಗ್ಯ ಪ್ರೇರಕರಾಗಿ ಸೇವೆ ಸಲ್ಲಿಸುತ್ತಿರುವ ಸುರೇಶ್ ಯಳಜಿತ್ ಹಾಗೂ ಸಮುದಾಯದ ಮಾದರಿ ಗುಂಪು ಆಗಿರುವ ಹಾಲಾಡಿ ಬತ್ತಗುಳಿ ಕೊರಗರ ಗುಂಪಿನ ಪರವಾಗಿ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು. ಕಳ್ತೂರು ಗ್ರಾಪಂ ಸದಸ್ಯರಾದ ಉಷಾ ಪೂಜಾರಿ, ನಾಗೇಶ ನಾಯ್ಕ, ಕರ್ನಾಟಕ ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷ ಸುಶೀಲಾ ನಾಡ, ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿರ್ದೇಶಕಿ ಡಾ.ಸುನೀತಾ ಶೆಟ್ಟಿ, ಗೆಳೆಯರ ಬಳಗ ತಂಡದ ಗೌರವ ಸಲಹೆಗಾರ ಸತೀಶ್ ಪೆರ್ಡೂರು, ಗೌರವಾಧ್ಯಕ್ಷ ಪುತ್ರನ್ ಹೆಬ್ರಿ ಮತ್ತಿತರರು ಉಪಸ್ಥಿತರಿದ್ದರು. ರಂಜಿತ್ ಕಳ್ತೂರು ಸ್ವಾಗತಿಸಿದರು. ಸುರೇಂದ್ರ ಕಳ್ತೂರು ಮತ್ತು ವಿಮಲ ಕಳ್ತೂರು ಕಾರ್ಯಕ್ರಮ ನಿರೂಪಿಸಿದರು. ಸುಚಿತ್ರಾ ಕಳ್ತೂರು ಪ್ರಸ್ತಾವಿಸಿದರು. ಸುಪ್ರೀತಾ, ಸುಚಿತ್ರಾ ಬಹುಮಾನಿತರ ಪಟ್ಟಿ ವಾಚಿಸಿದರು. ರಂಜಿತಾ ಕಳ್ತೂರು ಸನ್ಮಾನಿತರ ಅಭಿನಂದನಾ ಪತ್ರ ಓದಿದರು. ಸುನಂದಾ ಕಳ್ತೂರು ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಸುರೇಶ್ ಕಳ್ತೂರು ವಂದಿಸಿದರು.