ಗಂದಿಗವಾಡ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಶ್ವಕರ್ಮ ಸಮುದಾಯದ ಸೇವಾ ಸಂಘ ಹಾಗೂ ಶ್ರೀ ವಿಶ್ವಕರ್ಮ ಉತ್ಸವ ಮೂರ್ತಿ ಉದ್ಘಾಟನೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಮೃತ್ಯುಂಜಯ ಸ್ವಾಮೀಜಿ, ಗಣಪತಿ ಮಹಾರಾಜರು, ಸದಾನಂದ ಪಾಟೀಲ ಇತರರಿದ್ದರು. 
ಜಿಲ್ಲೆ

ಕುಲಕಸುಬು ರಕ್ಷಣೆಯಾಗಲಿ

ರಾಘವೇಂದ್ರಗೌಡ ಭೀ ಪಾಟೀಲ್

ಇಟಗಿ: ನಾಡಿನ ಕಲೆ, ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದ್ದು, ಅವುಗಳ ಉಳಿವಿಗೆ ಸಂಘಟನಾತ್ಮಕ ಕಾರ್ಯ ಅವಶ್ಯ ಎಂದು ಖಾನಾಪುರ ಲೈಲಾ ಶುಗರ್ಸ್‌ ಎಂ.ಡಿ ಸದಾನಂದ ಪಾಟೀಲ ಹೇಳಿದರು.

ಸಮೀಪದ ಗಂದಿಗವಾಡ ಗ್ರಾಮದ ಪೇಟೆ ಓಣಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಶ್ವಕರ್ಮ ಸಮಾಜ ಸೇವಾ ಸಂಘ ಹಾಗೂ ಶ್ರೀ ವಿಶ್ವಕರ್ಮ ಉತ್ಸವ ಮೂರ್ತಿ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಗಂದಿಗವಾಡ ರಾಜಗುರು ಹಿರೇಮಠದ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಕುಲ ಕಸುಬುಗಳನ್ನು ರಕ್ಷಿಸುವಲ್ಲಿ ಪ್ರಯತ್ನ ನಡೆಯಲಿ ಎಂದರು.

ಸೇವಾ ಪುರಸ್ಕಾರ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲಾಯಿತು. ಯರಗಟ್ಟಿಯ ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು, ತಾಪಂ ಸದಸ್ಯ ಮಾರುತಿ ಕಮತಗಿ, ಗ್ರಾಪಂ ಅಧ್ಯಕ್ಷ ದೇಸಾಯಿ ಗಾಳಿ, ಉಪಾದ್ಯಕ್ಷೆ ಲಕ್ಷ್ಮೀ ಕಮತಗಿ, ಸದಸ್ಯರಾದ ವಿಜಯ ಕುಲಕರ್ಣಿ, ಶಿವಾ ಬಾಗವಾಡಕರ, ಬಸವರಾಜ ಯರಡಾಲ, ನಾಗೇಂದ್ರ ಕಮ್ಮಾರ, ಸಿದ್ದಪ್ಪ ಕಮ್ಮಾರ, ಅಶೋಕ ಕಮ್ಮಾರ, ಮಹಾಂತೇಶ ಕಮ್ಮಾರ, ವಿಶ್ವನಾಥ ಚಿಕ್ಕಮಠ, ಶಂಕರ ಕಮ್ಮಾರ ಇತರರಿದ್ದರು.