ಜಿಲ್ಲೆ

ಮಂಗಳೂರು ಕುಲಶೇಖರ ಹೋಲಿ ಕ್ರಾಸ್ ಚರ್ಚ್ ನಲ್ಲಿ 9 ದಿನಗಳ ನೊವೇನಾ ಆರಂಭ

Mangaluru - Prakash MC Manjeshwar

ಮಂಗಳೂರು: ನಗರದ ಕುಲಶೇಖರ ಹೋಲಿ ಕ್ರಾಸ್ ಚರ್ಚ್ ನಲ್ಲಿ ಮುಂಬರುವ ಮೊಂತಿ ಫೆಸ್ಟ್ ಪೂರ್ವಭಾವಿಯಾಗಿ ನಡೆಸುವ ಒಂಭತ್ತು ದಿನಗಳ ನೊವೆನಾವನ್ನು ಪ್ರಾರಂಭಿಸಲಾಯಿತು.
ಮೊದಲ ದಿನದ ನೊವೆನಾದ ಅಂಗವಾಗಿ ಬಾಲ ಮೇರಿಯ ಮೂರ್ತಿಯನ್ನು ಇಟ್ಟು ಮಕ್ಕಳಿಂದ ಹೂವುಗಳನ್ನು ಅರ್ಪಿಸಲಾಯಿತು.
ಬಲಿಪೂಜೆಯ ಬಳಿಕ ಈ ಕಾರ್ಯಕ್ರಮ ನಡೆಯಿತು.
ಚರ್ಚ್ ನ ಪ್ರಧಾನ ಧರ್ಮಗುರು ಫಾ.ಕ್ಲಿಫರ್ಡ್ ಫೆರ್ನಾಂಡಿಸ್, ಸಹಾಯಕ ಧರ್ಮಗುರು ಫಾ.ಐವನ್ ಕೊರ್ಡೆರೊ, ಪಾಲನಾ ಸಮಿತಿ ಉಪಾಧ್ಯಕ್ಷೆ ರೂತ್ ಕಾಸ್ಟೆಲಿನೋ, ಕಾರ್ಯದರ್ಶಿ ಅನಿಲ್ ಡೇಸಾ ಉಪಸ್ಥಿತರಿದ್ದರು.