ಹುಬ್ಬಳ್ಳಿ: ಇಲ್ಲಿಯ ಭವಾನಿನಗರದಲ್ಲಿರುವ ಭಾವದೀಪ ಶಿಕ್ಷಣ ಸಂಸ್ಥೆಯ ಶ್ರೀಮತಿ ವಿಮಲಾ ಕುಲಕರ್ಣಿ ಮೆಮೋರಿಯಲ್
ಶಾಲೆಯ ವಾಷಿರ್ಕ ಕ್ರೀಡಾಕೂಟ ಸೋಮವಾರ ಬಿ.ಜಿ. ಆಟದ ಮೈದಾನದಲ್ಲಿ ಜರುಗಿತು.
ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಶ್ರೀರಂಗ ಹನುಮಸಾಗರ ಮತ್ತು ಕಿರಣ ಅಡವಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ವಿದ್ಯಾಥಿರ್ಗಳು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿ ವೈಯಕ್ತಿಕ ಮತ್ತು ಗುಂಪು ಕ್ರೀಡೆಗಳಲ್ಲಿ ಸಾಧನೆ ತೋರಿದರು.
ಶಾಲೆಯ ಪ್ರಾಚಾಯೆರ್ ಶ್ರೀದೇವಿ ಮಳಗಿ, ಮುಖ್ಯೋಪಾಧ್ಯಾಯ ಅನಿತಾ ಬಾಗಲಕೋಟ, ದೈಹಿಕ ಶಿಕ್ಷಣ ಶಿಕ್ಷಕರಾದ ಅಶೋಕ ತುಬಾಕದ, ಕಲ್ಲಯ್ಯ ಹೊಸಮಠ ಮತ್ತು ಕವಿತಾ ಬಾರಕೇರ ಇತರರು ಉಪಸ್ಥಿತರಿದ್ದರು.
ಸ್ವಾತಿ ಕುಲಕರ್ಣಿ ಮತ್ತು ಅಕ್ಷತಾ ಕುರ್ಡೆಕರ್ ಕಾರ್ಯಕ್ರಮ ನಿರೂಪಿಸಿದರು.