ಮಂಡ್ಯ: ಯೋಗರಾಜ್ ಸಿನಿಮಾಸ್ ಅರ್ಪಿಸುವ ಪರ್ಲ್ ಸಿನಿ ಕ್ರಿಯೇಷನ್ಸ್ ಅಡಿ ನಿರ್ಮಾಣಗೊಂಡ ನಗುವಿನೊಂದಿಗೆ ಮಾಸ್ ಅಂಶಗಳಿರುವ ಹಾಗೂ ಉತ್ತಮ ಸಂದೇಶ ನೀಡುವ ‘ಕುಲದಲ್ಲಿ ಕೀಳ್ಯಾವುದೋ’ ಚಲನಚಿತ್ರವು ಮೇ.23ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕನಟ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೇನೂರು ಮನು ತಿಳಿಸಿದರು.
ಅಂದಾಜು 2.75 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಚಲನಚಿತ್ರಕ್ಕೆ ಯೋಗರಾಜ್‌ಭಟ್ ಅವರ ಕಥೆ, ಸಾಹಿತ್ಯವಿದೆ. ಕೆ.ರಾಮ್‌ನಾರಾಯಣ್ ನಿರ್ದೇಶನ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಹುತಾರಾಗಣ ಹೊಂದಿರುವ ಚಲನಚಿತ್ರದಲ್ಲಿ ಯೋಗರಾಜ್ ಭಟ್, ಸೋನಾಲ್ ಮೊಂತೆರೂ, ತಬಲನಾಣಿ, ಶರತ್ ಲೋಹಿತಾಶ್ವ, ಡ್ರಾೃಗನ್ ಮಂಜು, ಜೇಡರಹಳ್ಳಿ ಕೃಷ್ಣಪ್ಪ, ಕರಿಸುಬ್ಬು, ಹರೀಶ್‌ರಾಜು, ಸೀನ, ನಾಗೇಂದ್ರ ಅರಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 5 ಹಾಡುಗಳಿರುವ ಚಲನಚಿತ್ರವನ್ನು ರಾಮನಗರ, ಚನ್ನಪಟ್ಟಣ, ಸಕಲೇಶಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ವಿವರಿಸಿದರು.
ಚಿತ್ರ ತಂಡದ ಶಿವಮೂರ್ತಿ, ಮಂಡ್ಯ ಮಂಜು, ಹೇಮಂತ್ ಇದ್ದರು.