ಜಿಲ್ಲೆ

ಅಪೌಷ್ಠಿಕತೆ ಪ್ರಮಾಣ ಹೆಚ್ಚಳ; ಅಂಗನವಾಡಿ ಮೇಲ್ವಿಚಾರಕಿ ಮಾಧವಿ ವೈದ್ಯ ಕಳವಳ

ಕುಕನೂರು: ಮಕ್ಕಳ ಅಪೌಷ್ಠಿಕತೆ ನಿರ್ಮೂಲನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದೆ ಎಂದು ಅಂಗನವಾಡಿ ಮೇಲ್ವಿಚಾರಕಿ ಮಾಧವಿ ವೈದ್ಯ ಹೇಳಿದರು.

ತಾಲೂಕಿನ ಇಟಗಿ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಶನಿವಾರ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ತೀವ್ರ ಅಪೌಷ್ಠಿಕತೆ ಕಂಡು ಬರುತ್ತಿದೆ. ಪ್ರತಿ ತಿಂಗಳು ಮಗುವಿನ ತೂಕ ನೋಡಿ ಅಪೌಷ್ಠಿಕತೆಯಿಂದ ಪಾರು ಮಾಡಬೇಕು. ಅಪೌಷ್ಠಿಕತೆ ಪ್ರಮಾಣ ಹೆಚ್ಚಿದ್ದರೆ ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸಬೇಕು. ಮಗುವಿನ ಪಾಲನೆಗೆ ಕುಟುಂಬದವರೂ ಕಾಳಜಿ ತೋರಬೇಕೆಂದರು.

ಪೋಷಣ ಅಭಿಯಾನದ ಅಧಿಕಾರಿ ಸುನಿಲ್ ಕುಮಾರ್ ಬೆಲ್ಲದ, ಶಿಕ್ಷಕಿ ಗುರುಶಾಂತಮ್ಮ, ಮಹಿಳಾ ಆರೋಗ್ಯ ಸಹಾಯಕಿ ಬಸಮ್ಮ ಹಂಚಿನಾಳ, ಇಟಗಿ ವಲಯದ ಅಂಗನವಾಡಿ ಕಾರ್ಯಕರ್ತೆಯರು ಹಾಗು ಆಶಾ ಕಾರ್ಯಕರ್ತೆಯರಿದ್ದರು.