ಜಿಲ್ಲೆ

ಮೆಕ್ಕೆಜೋಳ, ಕಡಲೆ ಬೆಳೆಗೆ ಬೆಂಬಲ ಬೆಲೆ ಘೋಷಿಸಿ

ಕುಕನೂರು: ಪಟ್ಟಣದ ತಹಸಿಲ್ ಕಚೇರಿಯಲ್ಲಿ ಜಿಲ್ಲೆಯ ರೈತರು ಬೆಳೆದ ಮೆಕ್ಕೆಜೋಳ ಹಾಗೂ ಕಡಲೆ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿ ತಾಲೂಕು ರೈತ ಸೇನಾ ಕರ್ನಾಟಕ ಸಂಘದ ಪದಾಧಿಕಾರಿಗಳು ಬುಧವಾರ ಶಿರಸ್ತೇದಾರ್ ಮಹಮ್ಮದ್ ಮುಸ್ತಾಫ್‌ಗೆ ಮನವಿ ಸಲ್ಲಿಸಿದರು.

ಮುಂಗಾರು ಅವಧಿಯಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ ಬೆಳೆ ರೋಗಕ್ಕೆ ತುತ್ತಾಗಿ, ಅಷ್ಟೋ ಇಷ್ಟು ಬೆಳೆ ಬಂದಿದೆ. ಅಲ್ಲದೆ ಈಗಾಗಲೇ ಹಿಂಗಾರು ಬಿತ್ತನೆ ಕಾರ್ಯ ಸಹ ಆರಂಭವಾಗಿದ್ದು, ರೈತರು ಕಡಲೆ ಬೆಳೆ ಹೆಚ್ಚಾಗಿ ಬಿತ್ತನೆ ಮಾಡುತ್ತಾರೆ. ಬೆಳೆ ಬಂದು ಎರಡು ಮೂರು ತಿಂಗಳು ನಂತರ ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರ ತೆರೆದರೆ ಕಡಿಮೆ ಪ್ರಮಾಣದಲ್ಲಿ ಕಡಲೆ ಬೆಳೆದ ರೈತರಿಗೆ ಇದರ ಅನುಕೂಲ ಆಗುವುದಿಲ್ಲ. ಆದ್ದರಿಂದ ಕೂಡಲೇ ಮೆಕ್ಕೆಜೋಳ ಹಾಗೂ ಕಡಲೆಗೆ ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರ ತೆರೆಯಬೇಕು ಆಗ್ರಹಿಸಿದರು.

ಸಂಘದ ಜಿಲ್ಲಾ ವಕ್ತಾರ ಬಸವರೆಡ್ಡಿ ಬೀಡಿನಾಳ, ರೈತರಾದ ರಾಮಣ್ಣ ಬಾವಿಮನಿ, ಬಾಳಪ್ಪ ಅರಬರ್, ಶಿವಯ್ಯ ಇತರರಿದ್ದರು.