ಕುಕನೂರಿನಲ್ಲಿ ಬುಧವಾರ ಬಿಜೆಪಿಯಿಂದ ಮೇಣದಬತ್ತಿ ಬೆಳಗಿ ಉಗ್ರರಿಂದ ಹತರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಾಪಂ ಮಾಜಿ ಉಪಾಧ್ಯಕ್ಷ ಶಿವಕುಮಾರ ನಾಗಲಾಪುರಮಠ, ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ನಗರ ಘಟಕದ ಅಧ್ಯಕ್ಷ ಬಸವರಾಜ ಹಾಳಕೇರಿ, ಕರಿಬಸಯ್ಯ ಬಿನ್ನಾಳ, ಮಹಾಂತೇಶ್ ಹೂಗಾರ, ಪಪಂ ಸದಸ್ಯ ಸಿದ್ದು ಉಳ್ಳಾಗಡ್ಡಿ ಇತರರಿದ್ದರು.  
ಜಿಲ್ಲೆ

ದುಷ್ಟ ಶಕ್ತಿಗಳನ್ನು ಸದೆಬಡಿಯಲಿ

ಕುರುವತ್ತಿ ಶ್ರೀಕಾಂತಪ್ಪ

ಕುಕನೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ ಮೂವರು ಕನ್ನಡಿಗರು ಸೇರಿ 26 ಜನರ ಮಾರಣ ಹೋಮ ನಡೆಸಿ ಅಟ್ಟಹಾಸ ಮೆರೆದಿರುವ ಭಯೋತ್ಪಾದಕರನ್ನು ಮಟ್ಟಹಕಾಗಬೇಕು ಎಂದು ತಾಪಂ ಮಾಜಿ ಉಪಾಧ್ಯಕ್ಷ, ಬಿಜೆಪಿ ಮುಖಂಡ ಶಿವಕುಮಾರ ನಾಗಲಾಪುರಮಠ ಒತ್ತಾಯಿಸಿದರು.

ಪಟ್ಟಣದ ಶಿರೂರು ವೀರಭದ್ರಪ್ಪ ವೃತ್ತದಲ್ಲಿ ಬುಧವಾರ ರಾತ್ರಿ ಕಾಶ್ಮೀರದಲ್ಲಿನ ಉಗ್ರರ ದಾಳಿ ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾಶ್ಮೀರದಲ್ಲಿ ದುರ್ಘಟನೆ ನಡೆದ ಕೆಲ ಹೊತ್ತಿನಲ್ಲೇ ಸಚಿವ ಸಂತೋಷ್ ಲಾಡ್ ಅಧಿಕಾರಿಗಳೊಂದಿಗೆ ಅಲ್ಲಿಗೆ ತೆರಳಿ ಕನ್ನಡಿಗರ ರಕ್ಷಣೆಗೆ ಮುಂದಾಗಿರುವುದು ಸ್ವಾಗತಾರ್ಹ. ಈ ಘೋರ ಕೃತ್ಯದ ಹಿಂದಿರುವ ಎಲ್ಲ ದುಷ್ಟ ಶಕ್ತಿಗಳನ್ನು ಸದೆಬಡಿಯುವಲ್ಲಿ ಕೇಂದ್ರ ಸರ್ಕಾರ ಕೂಡಲೇ ಕಾರ್ಯಪ್ರವೃತ್ತವಾಗಬೇಕಿದೆ. ದೇಶ ರಕ್ಷಣೆ ವಿಚಾರದಲ್ಲಿ ಪಕ್ಷ, ಧರ್ಮಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಿ ಹೋರಾಡಬೇಕಿದೆ ಎಂದರು.

ಪಪಂ ಮಾಜಿ ಅಧ್ಯಕ್ಷ ಶಂಭು ಜೋಳದ್, ಮಾಜಿ ಸದಸ್ಯ ಕನಕಪ್ಪ ಬ್ಯಾಡರ್, ಪ್ರಮುಖರಾದ ಶಿವರಾಜಗೌಡ ಯಲ್ಲಪ್ಪಗೌಡ್ರ, ಬಾಲರಾಜ ಗಾಳಿ, ಜಗನ್ನಾಥ ಭೂವಿ, ವೀರೇಶ ಸಬರದ, ಜಗದೀಶ ಸೂಡಿ, ನಾಗಪ್ಪ ಕಲ್ಮನಿ, ಲಕ್ಷ್ಮಣ ಕಾಳಿ, ಚಂದ್ರು ಬಗನಾಳ, ಪ್ರಕಾಶ ಬೋರಣ್ಣವರ, ವಿನಾಯಕ ಯಾಳಗಿ, ಮಂಜು ಪೋಳ್ಳದ್, ಹನುಮಂತ ಆರುಬೆರಳಿನ, ಮಧು ಬಾರಿಗಿಡದ, ನಾಗರಾಜ ನಿಕ್ಕಂ ಇತರರಿದ್ದರು.