ಜಿಲ್ಲೆ

ಕುಕ್ಕೆ: ಶ್ರೀ ದೇವಳದಲ್ಲಿ ಡಿ.8ರಿಂದ 24ರ ತನಕ ಸರ್ಪಸಂಸ್ಕಾರ ಸೇವೆ ಇಲ್ಲ

Mangaluru - Nishantha Narayana


ಸುಬ್ರಹ್ಮಣ್ಯ:
ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ಡಿ.10ರಿಂದ 24ರ ತನಕ ನೆರವೇರಲಿದೆ.ಜಾತ್ರೋತ್ಸವದ ನಿಮಿತ್ತ ಕ್ಷೇತ್ರದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪ ಸಂಸ್ಕಾರವು ಡಿ.8ರಿಂದ 24ರ ತನಕ ನೆರವೇರುವುದಿಲ್ಲ. ಡಿ.25ರಿಂದ ಸರ್ಪಸಂಸ್ಕಾರ ಸೇವೆ ಆರಂಭವಾಗಲಿದೆ.ಆದರೆ ಇತರ ಸೇವೆಗಳು ಎಂದಿನAತೆ ನೆರವೇರುತ್ತದೆ.ಲಕ್ಷದೀಪೋತ್ಸವ, ಚೌತಿ, ಪಂಚಮಿ ಮತ್ತು ಷಷ್ಠಿ ದಿನ ಕೆಲವೊಂದು ಸೇವೆಗಳು ನೆರವೇರುವುದಿಲ್ಲ ಭಕ್ತಾಧಿಗಳು ಸಹಕರಿಸಬೇಕು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.


ಪ್ರಾರ್ಥನೆ,ಆಶ್ಲೇಷ ಬಲಿ ಸೇವೆಯಲ್ಲಿ ವ್ಯತ್ಯಯ:
ಲಕ್ಷದೀಪೋತ್ಸವ(ಡಿ.12), ಚೌತಿ(ಡಿ.16), ಪಂಚಮಿ(ಡಿ.17) ದಿನದಂದು ರಾತ್ರಿ ಹೊತ್ತಿನಲ್ಲಿ ಪ್ರಾರ್ಥನೆ ಸೇವೆ ಇರುವುದಿಲ್ಲ. ಚಂಪಾಷಷ್ಠಿ(ಡಿ.18) ದಿನದಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಚಂಪಾಷಷ್ಠಿ ದಿನ ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ನೆರವೇರುವುದಿಲ್ಲ. ಲಕ್ಷದೀಪೋತ್ಸವ(ಡಿ.12), ಚೌತಿ(ಡಿ.16), ಪಂಚಮಿ(ಡಿ.17),ಚAಪಾಷಷ್ಠಿ(ಡಿ.18) ಮತ್ತು ಕೊಪ್ಪರಿಗೆ ಇಳಿಯುವ ದಿನ(ಡಿ.24)ದಂದು ಪಂಚಾಮೃತ ಮಹಾಭಿಷೇಕ ಸೇವೆ ನಡೆಯುವುದಿಲ್ಲ.ಡಿ.10ರಿಂದ ಡಿ.24ರ ತನಕ ಸಾಯಂಕಾಲದ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ.

ಇತರ ಸೇವೆಗಳು ಎಂದಿನAತೆ:
ಚಂಪಾಷಷ್ಠಿ ಜಾತ್ರೋತ್ಸವವು ಡಿ.10ರಿಂದ 24ರ ತನಕ ನೆರವೇರಲಿದ್ದು ಜಾತ್ರೋತ್ಸವದ ಪ್ರಧಾನ ದಿನಗಳಾದ ಲಕ್ಷದೀಪ, ಚೌತಿ,ಪಂಚಮಿ ಮತ್ತು ಷಷ್ಠಿಯಂದು ಮಾತ್ರ ಕೆಲವೊಂದು ಸೇವೆಗಳನ್ನು ನೆರವೇರಿಸಲು ಅವಕಾಶಗಳು ಇರುವುದಿಲ್ಲ.ಆದರೆ ಇತರ ದಿನಗಳಲ್ಲಿ ಆಶ್ಲೇಷಬಲಿ, ಪಂಚಾಮೃತ ಮಹಾಭಿಷೇಕ, ಶೇಷಸೇವೆ, ಕಾರ್ತಿಕಪೂಜೆ, ಮಹಾಪೂಜೆ, ತುಲಾಭಾರ, ನಾಗಪ್ರತಿಷ್ಠೆ ಮೊದಲಾದುವುಗಳು ಎಂದಿನAತೆ ನೆರವೇರಲಿದೆ.ಸರ್ಪಸಂಸ್ಕಾರ ಮತ್ತು ಸಂಜೆಯ ಆಶ್ಲೇಷ ಬಲಿ ಸೇವೆಗಳು ಮಾತ್ರ ಡಿ.24ರ ತನಕ ನೆರವೇರುವುದಿಲ್ಲ.


ಡಿ.9 ದರುಶನದಲ್ಲಿ ವ್ಯತ್ಯಯ:
ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಡಿ.9ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಪವಿತ್ರ ಕಾರ್ಯದ ಕಾರಣ ಭಕ್ತಾಧಿಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯ ತನಕ ಶ್ರೀ ದೇವರ ದರುಶನ ಹಾಗೂ ಸೇವಾಧಿಗಳನ್ನು ನೆರವೇರಿಸಲು ಅವಕಾಶ ಇರುವುದಿಲ್ಲ.2 ಗಂಟೆಯ ನಂತರ ಶ್ರೀ ದೇವರ ದರ್ಶನಕ್ಕೆ ಹಾಗೂ ಆಯ್ದ ಸೇವೆಗಳನ್ನು ನೆರವೇರಿಸಲು ಅವಕಾಶವಿದೆ.