ಜಿಲ್ಲೆ

ಕುಕ್ಕೆ ದೇವರಗದ್ದೆ ಮೊಗೇರ್ಕಳ, ಕೊರಗಜ್ಜ ದೈವದ ನೇಮೋತ್ಸವ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ದೇವರಗದ್ದೆಯ ಅಗರಿಕಜೆ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ಹಾಗೂ ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವ ಶನಿವಾರ ನೆರವೇರಿತು.

ಪ್ರತಿಷ್ಠಾಪನಾ ವಾರ್ಷಿಕೋತ್ಸವದ ನಿಮಿತ್ತ ಮಹಾಗಣಪತಿ ಹೋಮ, ದೈವಗಳಿಗೆ ಕಲಶಾಭಿಷೇಕ, ಪೂರ್ವಕ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು. ಅರ್ಚಕ ರಘುರಾಮ ಅಮ್ಮಣ್ಣಾಯ ವೈದಿಕ ವಿಧಿವಿಧಾನ ನೆರವೇರಿಸಿದರು.

ಭಾನುವಾರ ಆದಿಮೊಗೇರ್ಕಳರು ರಂಗಸ್ಥಳದಲ್ಲಿ ನರ್ತನ ಸೇವೆ, ನಂತರ ಸತ್ಯದೇವತೆ ತನ್ನಿಮಾನಿಗ ನರ್ತನ ಸೇವೆ ನೆರವೇರಿತು. ಸೋಮವಾರ ಬೆಳಗ್ಗೆ

ಕಾರಣಿಕ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನರ್ತನ ಸೇವೆ, ದೈವಕ್ಕೆ ಹರಕೆಯ ನೇಮೋತ್ಸವ ನೆರವೇರಿತು.