ಕುಕನೂರು ತಾಲೂಕಿನ ವೀರಾಪುರದಲ್ಲಿ ಆರಾಧ್ಯ ದೈವಗಳಾದ ಶ್ರೀ ಗಾಳೆಮ್ಮ ಹಾಗೂ ದುರ್ಗಾದೇವಿ ಉತ್ಸವ ಮೂರ್ತಿಗಳ ಮೆರವಣಿಗೆ ಮಂಗಳವಾರ ಜರುಗಿತು.  
ಜಿಲ್ಲೆ

ಶ್ರೀ ಗಾಳೆಮ್ಮ-ದುರ್ಗಾದೇವಿ ಮೆರವಣಿಗೆ ಅದ್ದೂರಿ

ಕುಕನೂರು: ತಾಲೂಕಿನ ವೀರಾಪುರದಲ್ಲಿ ಗ್ರಾಮ ದೈವಗಳಾದ ಶ್ರೀ ಗಾಳೆಮ್ಮ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.

ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀಮಾತೆಯರಿಗೆ ಬೆಳಿಗಿನ ಜಾವ 4ಗಂಟೆಗೆ ಡೊಳ್ಳು ಮೇಳದೊಂದಿಗೆ ತೆರಳಿ ಹೂಗಾರ ಮನೆಯಿಂದ ಮಾಲೆ ತರಲಾಯಿತು. ನಂತರ ಹಿರೇಗೌಡ್ರ ಮನೆಯಿಂದ ಉಡಿ ತುಂಬಿ, 6 ಗಂಟೆಗೆ ನದಿಗೆ ಹೋಗಿ ಗಂಗಾಪೂಜೆ ನೆರವೇರಿಸಿ ಅಗ್ನಿ ಪ್ರವೇಶ ಮಾಡಲಾಯಿತು. ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉಭಯ ದೇವಿಯರ ಮೂರ್ತಿಗಳ ಮೆರವಣಿಗೆ ಜರುಗಿತು. ವಾದ್ಯ ಮೇಳಗಳು ಮೆರವಣಿಗೆ ಮೆರುಗು ಹೆಚ್ಚಿಸಿದವು.

ಗ್ರಾಮದ ಮುಖಂಡರಾದ ಪ್ರಕಾಶ್ ದೊಡ್ಡಮನಿ, ಎಂ.ಡಿ.ಗಾಳೆಪ್ಪ, ಕರೆಹನುಮಪ್ಪ ನಡಲುಮನಿ, ಸಣ್ಣ ವೀರಪ್ಪ ಬೇವೂರ, ಹನುಮಪ್ಪ ನರೇಗಲ್, ಸತ್ಯಪ್ಪ ಕಡೆಮನಿ, ಕೃಷ್ಣಪ್ಪ ಕಡೆಮನಿ, ಯಲ್ಲಪ್ಪ ಆಡಿನ್, ಮಾರುತಿ ಕಡೆಮನಿ, ಹನುಮಂತ ಹೊಸಮನಿ, ಡಾ.ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ, ಶ್ರೀದುರ್ಗಾದೇವಿ ಹಾಗೂ ಗಾಳೆಮ್ಮ ದೇವಿ ಕಮಿಟಿ ಸದಸ್ಯರು, ವೀರಾಪುರದ ಸದ್ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದರು.