ಕುಕನೂರಿನಲ್ಲಿ ಕೋರಿಕೆ ಘಟಕ ಸಿಕ್ಕ ಸಂತಸದಲ್ಲಿ ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿರುವುದು. 
ಜಿಲ್ಲೆ

ಅಮಾನತು ಆದೇಶ ರದ್ದುಗೊಳಿಸಿ ಕರ್ತವ್ಯಕ್ಕೆ ಅವಕಾಶ

Koppal

ಕುಕನೂರು: ಕರ್ತವ್ಯ ಲೋಪ ಕಾರಣಕ್ಕೆ ಅಮಾನತ್ತಿನಲ್ಲಿರುವ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರ ಅಮಾನತು ಆದೇಶ ಹಿಂಪಡೆದು ಕರ್ತವ್ಯಕ್ಕೆ ಹಾಜರಾಗಲು ವಕಾಶ ನೀಡಲಾಗುತ್ತಿದೆ.

ಕರ್ತವ್ಯ ಸ್ಥಳ ನಿಗದಿ ಬಗ್ಗೆ ಅಸಮಾಧಾನಗೊಂಡು ಕೆಲಸಕ್ಕೆ ಗೈರಾಗಿದ್ದ ಸಿಬ್ಬಂದಿಯನ್ನೂ ಆಹ್ವಾನಿಸಿ ಕೋರಿದ ಘಟಕಕ್ಕೆ ನಿಯೋಜನೆ ಮಾಡಲಾಗುತ್ತಿದೆ. ಇದರಿಂದ ಅಮಾನತು ಆದೇಶ ರದ್ದಾಗಿ ಕೆಲಸಕ್ಕೆ ಮರು ನೇಮಕ ಹಾಗೂ ಕೋರಿಕೆಯ ಘಟಕ ಸಿಕ್ಕ ಸಂತಸದಲ್ಲಿ ಕೆಲವು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಡಿಪೋ ಅಧಿಕಾರಿಗಳು ಚಾಲಕ ಹಾಗೂ ನಿರ್ವಾಹಕರ ಕೊರತೆ ನೀಗಿಸಿ ಬಸ್‌ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿರುವುದು ಕಂಡುಬರುತ್ತಿದೆ.