ಬೆದವಟ್ಟಿ ಗ್ರಾಮದ ಹಿರೇಮಠದ ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಶ್ರೀಶೈಲ ಪೀಠದ ಜಗದ್ಗುರು ಶ್ರೀಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವಾತ್ಪದರು ಆಶೀರ್ವಚನ ನೀಡಿದರು. ಯಲಬುರ್ಗಾ ಹಿರೇಮದ ಸಿದ್ದರಾಮೇಶ್ವರ ಸ್ವಾಮೀಜಿ, ಕುಕನೂರ ಅನ್ನದಾನೇಶ್ವರ ಶಾಖಾ ಮಠದ ಡಾ.ಮಹಾದೇವ ಸ್ವಾಮೀಜಿ ಇತರರಿದ್ದರು. 
ಜಿಲ್ಲೆ

ಅರಿವಿನ ದೀಪ ಬೆಳಗಿಸಿದ ಸಂಗಮೇಶ್ವರ ಸ್ವಾಮೀಜಿ

ಕುಕನೂರು : ಬೆದವಟ್ಟಿ ಹಿರೇಮಠದ ಶಿವ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅರಿವಿನ ದೀಪ ಬೆಳಗಿಸಿ, ನಾಡಿನ ಅನೇಕ ಮಠಗಳ ಶ್ರೀಗಳಿಗೆ ದೀಕ್ಷೆ ನೀಡಿದ್ದಾರೆ. ಅಲ್ಲದೆ ಲಿಂಗಪೂಜೆ ಮೂಲಕ ಸಮಾನತೆ ಸಂದೇಶ ಸಾರಿದ ಶ್ರೇಷ್ಠ ಶರಣರು ಎಂದು ಶ್ರೀಶೈಲ ಪೀಠದ ಜಗದ್ಗುರು ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವಾತ್ಪದರು ಹೇಳಿದರು.

ತಾಲೂಕಿನ ಬೆದವಟ್ಟಿ ಗ್ರಾಮದ ಹಿರೇಮಠದ ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಭಾನುವಾರ ಆಶೀರ್ವಚನ ನೀಡಿದರು. ಶಿವ ಸಂಗಮೇಶ್ವರ ಶ್ರೀಗಳು ಜೀವನವನ್ನೇ ಗಂಧದಂತೆ ತೇದು ಸಮಾಜಕ್ಕೆ ಸುಗಂಧವನ್ನು ನೀಡಿದ್ದಾರೆ. ಅಲ್ಲದೆ ಸರ್ವಸ್ವವನ್ನೂ ಧಾರೆ ಎರೆದು ಅನೇಕ ಧಾರ್ಮಿಕ ಕಾರ್ಯಗಳನ್ನು ಮಾಡಿದ್ದಾರೆ. ಹಿಂದೆ ಪಂಚ ಪೀಠದ ಶ್ರೀಗಳನ್ನು ಕರೆಸಿ ಭವ್ಯ, ದಿವ್ಯ ಕಾರ್ಯಕ್ರಮ ಮಾಡಿ ಗ್ರಾಮಕ್ಕೆ ಕೀರ್ತಿಯನ್ನು ತಂದಿದ್ದಾರೆ. ಭಕ್ತರಿಗೆ ದಾಸೋಹದಲ್ಲಿ ತುಪ್ಪದ ಊಟವನ್ನು ಮಾಡಿಸಿದ ಕೀರ್ತಿ ಅವರದ್ದಾಗಿದೆ. ನಾಡಿನ ಅನೇಕ ಮಠ-ಮಾನ್ಯಗಳಿಗೆ ಮಾರ್ಗದರ್ಶಕರಾಗಿದ್ದರು ಎಂದರು.