ಕುಕನೂರು; ವೈಭವದ ಮದುವೆಗಳಿಗೆ ಪ್ರೋತ್ಸಾಹಬೇಡ. ಸಾಮೂಹಿಕ ವಿವಾಹಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ಡಾ.ಮಹಾದೇವ ಸ್ವಾಮೀಜಿ ಹೇಳಿದರು. ತಾಲೂಕಿನ ಸೋಂಪೂರ ಗ್ರಾಮದಲ್ಲಿ 58ನೇ ವರ್ಷದ ಶ್ರೀ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಜಾತ್ರೋತ್ಸವ, 101 ಮುತ್ತೈದೆಯರಿಗೆ ಉಡಿತುಂಬುವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವೈಭವದ ವಿವಾಹಗಳಿಗೆ ದುಂದು ವೆಚ್ಚವಾಗಲಿದೆ. ಇಂಥ ವಿವಾಹಗಳಿಗೆ ಕಡಿವಾಣ ಹಾಕಬೇಕು. ಬಡ ಜನರು ಮದುವೆಗಾಗಿ ಸಾಲ ಮಾಡುವುದು ತಪ್ಪಿಸಲು ಸಾಮೂಹಿಕ ವಿವಾಹ ಸಹಕಾರಿ. ಅಲ್ಲದೆ ಬಡವ-ಬಲ್ಲಿದ, ಜಾತಿ-ಧರ್ಮ ಸಂಕೋಲೆಯಿಂದ ಹೊರ ಬರಲು ಸಾಧ್ಯ. ಭಾವೈಕ್ಯ ಬಿಂಬಿಸುವ ಇಂಥ ಕಾರ್ಯಕ್ರಮಗಳು ಪ್ರತಿಯೊಂದು ಗ್ರಾಮಗಳಲ್ಲಿ ನಡೆಯಲಿ ಎಂದರು.
ಪಿಎಸ್‌ಐ ಟಿ.ಗುರುರಾಜ, ಪ್ರಮುಖರಾದ ಸೋಮಶೇಖರ ಗೌಡ ಪಾಟೀಲ, ಸಿದ್ದಪ್ಪ ಹೈದ್ರಿ, ಕೆ.ಬಿ.ನಾಯಕರ, ಹುಚ್ಚೀರಪ್ಪ ಹೈದ್ರಿ, ಹೊಳಿಬಸಪ್ಪ ಮ್ಯಾಗೇರಿ, ಸಣ್ಣ ಮೈಲಾರಗೌಡ, ಶರಣಪ್ಪ ಗಟ್ಟಿರಡ್ಡಿಹಾಳ, ನಾಗಪ್ಪ ಕರಗಲ್, ಬಸಪ್ಪ ಕರಗಲ್, ಬಸವರಾಜ ಹಳ್ಳಿಕೇರಿ ಇತರರಿದ್ದರು.