ಬಿಜೆಪಿ ಮುಖಂಡ ಈರಣ್ಣ ಹುಬ್ಬಳ್ಳಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಕುಕನೂರು ಪಿಎಸ್‌ಐ ಟಿ.ಗುರುರಾಜ್‌ಗೆ ಗುರುವಾರ ಮನವಿ ಸಲ್ಲಿಸಿದರು. ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ, ಮಾಜಿ ಜಿಪಂ ಅಧ್ಯಕ್ಷ ರಾಮಣ್ಣ ಭಜಂತ್ರಿ, ಕಾರ್ಯಾಧ್ಯಕ್ಷ ಸಿದ್ದಯ್ಯ ಕಳ್ಳಿಮಠ, ದಳಪತಿ ವೀರಯ್ಯ ತೋಂಟದಾರ್ಯಮಠ ಇತರರಿದ್ದರು.  
ಜಿಲ್ಲೆ

ರಾಯರಡ್ಡಿ ನಿಂದನೆಗೆ ಕಾಂಗ್ರೆಸ್ ಆಕ್ರೋಶ

ಕುಕನೂರು: ಶಾಸಕ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಿಜೆಪಿ ಮುಖಂಡ ಈರಣ್ಣ ಹುಬ್ಬಳ್ಳಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಪಿಎಸ್‌ಐ ಟಿ.ಗುರುರಾಜ್‌ಗೆ ಗುರುವಾರ ಮನವಿ ಸಲ್ಲಿಸಿದರು.

ಡಿ.30ರಂದು ಕುಕನೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮುಖಂಡ ಈರಣ್ಣ ಹುಬ್ಬಳ್ಳಿ, ಶಾಸಕರನ್ನು ಅವಚ್ಯಾ ಶದ್ದಗಳಿಂದ ನಿಂದಿಸಿದ್ದಲ್ಲೇ ಹಲ್ಲೆ ಮಾಡುವಂತೆ ಸಾರ್ವಜನಿಕರಿಗೆ ಪ್ರಚೋದನೆ ನೀಡಿ ಸಮಾಜದ ಸ್ವಾಸ್ಥೃ ಹಾಳು ಮಾಡುವ ಕೆಲಸ ಮಾಡಿದ್ದಾರೆ. ಇದು ಸಂವಿಧಾನ ವಿರೋಧಿ ಕೃತ್ಯವಾಗಿದ್ದು ಕೂಡಲೇ ಈರಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ, ಮಾಜಿ ಜಿಪಂ ಅಧ್ಯಕ್ಷ ರಾಮಣ್ಣ ಭಜಂತ್ರಿ, ಕಾರ್ಯಾಧ್ಯಕ್ಷ ಸಿದ್ದಯ್ಯ ಕಳ್ಳಿಮಠ, ದಳಪತಿ ವೀರಯ್ಯ ತೋಂಟದಾರ್ಯಮಠ, ವಕೀಲ ಬಸವರಾಜ ಜಂಗ್ಲಿ, ಪಪಂ ಉಪಾಧ್ಯಕ್ಷ ಪ್ರಶಾಂತ ಆರುಬೆರಳಿನ್, ಸದಸ್ಯರಾದ ರಾಮಣ್ಣ ಬಂಕದಮನಿ, ಗಗನ್ ನೋಟಗಾರ, ಪ್ರಮುಖರಾದ ಕರಿಬಸಪ್ಪ ನಿಡಗುಂದಿ, ಆನಂದ ಉಳ್ಳಾಗಡ್ಡಿ, ಅಶೋಕ ತೋಟದ ಇತರರಿದ್ದರು.