ಕುಕನೂರು ಪಟ್ಟಣದಲ್ಲಿ ಲೋಕಸಭಾ ಚುನಾವಣೆ, ರಂಜಾನ್ ಮತ್ತು ಯುಗಾದಿ ನಿಮಿತ್ತ ಪೊಲೀಸ್ ಇಲಾಖೆ ಮತ್ತು ರ‌್ಯಾಪಿಡ್ ಆಕ್ಷನ್ ಪೋರ್ಸ್‌ನಿಂದ ಪಥಸಂಚಲನ ನಡೆಯಿತು.  
ಜಿಲ್ಲೆ

ಕುಕನೂರಿನಲ್ಲಿ ಪಥಸಂಚಲನ

ಕುಕನೂರು: ಪಟ್ಟಣದಲಿ ಪೊಲೀಸ್ ಇಲಾಖೆ ಮತ್ತು ರ‌್ಯಾಪಿಡ್ ಆಕ್ಷನ್ ಪೋರ್ಸ್‌ನಿಂದ ಲೋಕಸಭೆ ಚುನಾವಣೆ, ರಂಜಾನ್ ಮತ್ತು ಯುಗಾದಿ ನಿಮಿತ್ತ ಪಥಸಂಚಲನ ಭಾನುವಾರ ನಡೆಯಿತು.

ಯಲಬುರ್ಗಾ ಸಿಪಿಐ ಮೌನೇಶ್ವರ ಮಾಲಿಪಾಟೀಲ್ ನೇತೃತ್ವದಲ್ಲಿ ಪಟ್ಟಣ ಪ್ರಮುಖ ವೃತ್ತಗಳಾದ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ವೀರಭದ್ರಪ್ಪ ವೃತ್ತದ ಮೂಲಕ ಪಟ್ಟಣ ಪಂಚಾಯತಿ ಮಾರ್ಗವಾಗಿ ಪಥಸಂಚಲನ ಜರುಗಿತು.

ಸಾರ್ವಜನಿಕರಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಿದರು. ಪಿಎಸ್‌ಐಗಳಾದ ಟಿ.ಗುರುರಾಜ, ವಿಜಯ ಪ್ರತಾಪ್ ಹಾಗೂ ಯಲಬುರ್ಗಾ, ಕುಕನೂರು ವೃತ್ತದ ಪೊಲೀಸ್ ಸಿಬ್ಬಂದಿ ಇದ್ದರು.