ಕುಕನೂರು ತಾಲೂಕಿನ ಮಂಗಳೂರು ಗ್ರಾಮದಲ್ಲಿ ಗ್ರಾಮಾಡಳಿತದಿಂದ ಆರೋಗ್ಯ ತಪಾಸಣೆ ಉಚಿತ ಶಿಬಿರ ನಡೆಯಿತು. ಡಾ.ಲೋಕೇಶ, ಡಾ.ಸುಧಾಕರ, ಡಾ.ಸಂಗಮೇಶ್ ಹಿರೇಮಠ, ಡಾ.ಪ್ರಜ್ವಲಾ, ಡಾ.ಎಂ.ಆರ್ ಕುಲಕರ್ಣಿ, ಡಾ.ಪಾರ್ವತಿ ಇತರರಿದ್ದರು.  
ಜಿಲ್ಲೆ

ಆರೋಗ್ಯ ತೊಂದರೆಗೆ ಚಿಕಿತ್ಸೆ ಅಗತ್ಯ

ಕುರುವತ್ತಿ ಶ್ರೀಕಾಂತಪ್ಪ

ಕುಕನೂರು: ತಾಲೂಕಿನ ಮಂಗಳೂರು ಗ್ರಾಮದ ಮಂಗಳೇಶ್ವರ ಕಲ್ಯಾಣ ಮಂಟಪದಲ್ಲಿ ಗ್ರಾಮಾಡಳಿತ, ವಿಶ್ವ ಹಿಂದು ಪರಿಷತ್ ವತಿಯಿಂದ ಆರೋಗ್ಯ ತಪಾಸಣೆ ಉಚಿತ ಶಿಬಿರ ಗುರುವಾರ ನಡೆಯಿತು.

ಡಾ.ಲೋಕೇಶ ಮಾತನಾಡಿ, ಗ್ರಾಮೀಣರು ಇಂತಹ ಉಚಿತ ಶಿಬಿರದಲ್ಲಿ ಸದುಪಯೋಗ ಪಡೆದುಕೊಳ್ಳಬೇಕು. ತಪಾಸಣೆ ವೇಳೆ ವೈದ್ಯರು ಏನಾದರು ಆರೋಗ್ಯ ಸಮಸ್ಯೆ ಇದೆ ಎಂದು ತಿಳಿಸಿದರೆ ನಿರ್ಲಕ್ಷೃ ಮಾಡದೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ಶಿಬಿರದಲ್ಲಿ ಕಣ್ಣಿನ ಪೊರೆ, ಮೊಣಕಾಲು ನೋವು ಸೇರಿ ಜನರ ಇತರ ಆರೋಗ್ಯ ತೊಂದರೆಗಳನ್ನು ತಪಾಸಣೆ ಮಾಡಲಾಯಿತು. ವೈದ್ಯರಾದ ಡಾ.ಸುಧಾಕರ, ಡಾ.ಸಂಗಮೇಶ್ ಹಿರೇಮಠ, ಡಾ.ಪ್ರಜ್ವಲಾ, ಡಾ.ಎಂ.ಆರ್ ಕುಲಕರ್ಣಿ, ಡಾ.ಪಾರ್ವತಿ, ಡಾ. ಸೃಜನ್ಯಾ, ಎಚ್.ಆರ್.ಸೌಂದರ್ಯ ಇತರರಿದ್ದರು.