ಕೊಪ್ಪಳದ ಅಪಾರ ಜಿಲ್ಲಾಧಿಕಾರಿ ಸಾವಿತ್ರಿ ಕಡಿಗೆ ಕುಕನೂರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ಗ್ರಾಮ ಘಟಕದ ಅಧ್ಯಕ್ಷ ಶ್ರೀಧರ್ ದಾಸರ, ಕಾರ್ಯಕರ್ತರಾದ ಮಂಜಪ್ಪ ಕಿನ್ನಾಳ, ಶರಣಪ್ಪ ಕಾಳಿ, ಹನುಮೇಶ ಇದ್ದರು. 
ಜಿಲ್ಲೆ

ಗೃಹಲಕ್ಷ್ಮೀ ಇ-ಕೆವೈಸಿಗೆ ಹಣ ವಸೂಲಿ ತಪ್ಪಿಸಿ

ಕುಕನೂರು: ಗ್ರಾಮ ಒನ್ ಕೇಂದ್ರದಲ್ಲಿ ಗೃಹಲಕ್ಷ್ಮೀ ಇ-ಕೆವೈಸಿಗೆ ಹಣ ವಸೂಲಿ ಮಾಡುತ್ತಿರುವುದನ್ನು ತಡೆಯಲು ಒತ್ತಾಯಿಸಿ ಕುಕನೂರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕೊಪ್ಪಳದಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.

ಕುದರಿಮೋತಿಯಲ್ಲಿ ಗ್ರಾಮ ಒನ್ ಕೇಂದ್ರದಲ್ಲಿ ಹಣ ವಸೂಲಿ

ಕುಕನೂರು ತಾಲೂಕಿನ ಕುದರಿಮೋತಿಯಲ್ಲಿ ಗ್ರಾಮ ಒನ್ ಕೇಂದ್ರದಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಇ-ಕೆವೈಸಿ ಮಾಡಿಸಿಕೊಳ್ಳು ಉಚಿತ ಮಾಡಿದೆ. ಆದರೆ, ಗ್ರಾಮ ಒನ್ ಕೇಂದ್ರದಲ್ಲಿ ಕಳೆದ 15 ದಿನಗಳಿಂದ ಇ-ಕೆವೈಸಿಗೆ ಒಬ್ಬರಿಂದ 100 ರೂ. ಹಣ ವಸೂಲಿ ಮಾಡಲಾಗುತ್ತಿದೆ. ಇದರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆಯ ಕುದರಿಮೋತಿ ಗ್ರಾಮ ಘಟಕದ ಅಧ್ಯಕ್ಷ ಶ್ರೀಧರ್ ದಾಸರ ಒತ್ತಾಯಿಸಿದರು.
ಕಾರ್ಯಕರ್ತರಾದ ಮಂಜಪ್ಪ ಕಿನ್ನಾಳ, ಶರಣಪ್ಪ ಕಾಳಿ, ಹನುಮೇಶ, ಶರಣಪ್ಪ ಕೆಂಗಾರ ಇನ್ನಿತರರಿದ್ದರು.