ಕುಕನೂರಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯಿಂದ ಆಯೋಜಿಸಿದ್ದ ತಾಲೂಕಿನ ನೂತನ ರೈತ ಸಭೆಯಲ್ಲಿ ರೈತ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹ್ಮದ್ ನಜೀರಸಾಬ್ ಮುಲಿಮನಿ ಅವರನ್ನು ಕಾರ್ಯಕರ್ತರು ಸನ್ಮಾನಿಸಿದರು. ರೈತ ಮುಖಂಡರಾದ ಬಸವರಾಜ ಕೊಡ್ಲಿ, ಶರಣಯ್ಯ ಮುಳ್ಳುರೂಮಠ, ಸುಭಾಸ್ ಹಾಳಕೇರಿ, ವೀರಪ್ಪ ಕೌದಿ ಇದ್ದರು. 
ಜಿಲ್ಲೆ

ರೈತರ ಪರ ಹೋರಾಟಕ್ಕೆ ಸದಾ ಸಿದ್ಧ

ಪ್ರವೀಣ ಉದುಸಾ ದಲಬಂಜನ್

ಕುಕನೂರು: ರೈತರ ಹಿತಕ್ಕಾಗಿ ಸಂಘಟನೆ ಕಾರ್ಯಕರ್ತರು ರೈತ ಪರ ಧ್ವನಿ ಎತ್ತಬೇಕು ಎಂದು ರೈತ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹ್ಮದ್ ನಜೀರಸಾಬ್ ಮುಲಿಮನಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯಿಂದ (ಎಚ್.ಆರ್.ಬಸವರಾಜ ನೇತೃತ್ವ) ಆಯೋಜಿಸಿದ್ದ ಸಂಘಟನೆ ಪದಾಧಿಕಾರಿಗಳ ಸಭೆಯಲ್ಲಿ ಶನಿವಾರ ಮಾತನಾಡಿದರು. ಸ್ವಾರ್ಥ ಮನೋಭಾವನೆ ಬೆಳೆಸುವುದಕ್ಕೆ ರೈತ ಸಂಘವಾಗಬಾರದು. ರೈತರ ಪರ ಹೋರಾಟಕ್ಕೆ ಸದಾ ಸಿದ್ಧ ಎಂದರು.

ರೈತ ಮುಖಂಡ ಬಸವರಾಜ ಕೊಡ್ಲಿ ಪ್ರಾಸ್ತಾವಿಕ ಮಾತನಾಡಿ, ಈ ಹಿಂದೆ ನಿರಂತರವಾಗಿ ರೈತರ ಪರವಾಗಿ ಹೋರಾಟ, ಸಮಾವೇಶ ಮಾಡಲಾಗಿದೆ. ರೈತ ಕಷ್ಟ ಕಾರ್ಪಣ್ಯಗಳಿಗೆ ಸದಾ ಮುಂದೆ ಇರಲಾಗುವುದು. ರೈತಹಿತ ಕಾಯುವ ಕೆಲಸ ಮಾಡಲಾಗುವುದು ಎಂದರು.

ಮುಖಂಡ ಮೇಘರಾಜ್ ಜಿಡಗಿ ಮಾತನಾಡಿದರು. ರೈತ ಮುಖಂಡರಾದ ಶರಣಯ್ಯ ಮುಳ್ಳುರೂಮಠ, ಸುಭಾಸ್ ಹಾಳಕೇರಿ, ವೀರಪ್ಪ ಕೌದಿ, ನಿರ್ಮಲ ಹಳ್ಳಿ, ದೇವಮ್ಮ ಹಳ್ಳಿಗುಡಿ, ಸರೋಜಮ್ಮ ಕುಂಬಾರ, ದುರಗಮ್ಮ ಛಲದಡಿ, ಬಸಮ್ಮ ಅಂಗಡಿ, ಹನುಮಪ್ಪ ಹಳ್ಳಿಗುಡಿ, ನಿಂಗಜ್ಜ ಗುರಿಕಾರ, ಈರಮ್ಮ ಮಟ್ಟಮ್ಮನವರ ಇತರರಿದ್ದರು.