ಜಿಲ್ಲೆ

ಸಹಕಾರ ಸಂಘದಲ್ಲಿ ಪ್ರಾಮಾಣಿಕ ಕೆಲಸ ಅಗತ್ಯ

ಕುರುವತ್ತಿ ಶ್ರೀಕಾಂತಪ್ಪ

ಕುಕನೂರು: ಸಹಕಾರ ಸಂಘದಲ್ಲಿ ಪ್ರತಿಯೊಬ್ಬರು ಪ್ರಮಾಣಿಕವಾಗಿ ಕೆಲಸ ಮಾಡಬೇಕು. ಅಂದಾಗ ಸ್ಥಳೀಯ ರೈತರಿಗೆ ಅನುಕೂಲವಾಗುತ್ತದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಹಾಗೂ ಗೋದಾಮು ಕಟ್ಟಡ ಉದ್ಘಾಟಿಸಿ ಬುಧವಾರ ಮಾತನಾಡಿದರು.

ತಾಲೂಕಿನ ಮಸಬಹಂಚಿನಾಳ, ನಿಟ್ಟಾಲಿ ಮತ್ತು ಗಾವರಾಳ ಗ್ರಾಮದ ರೈತರ ಶ್ರಮದ ಫಲವಾಗಿ ಇಂತಹ ಕಟ್ಟಡ ನಿರ್ಮಾಣವಾಗಲು ಸಾಧ್ಯವಾಗಿದೆ. ಬಿತ್ತನೆ ಬೀಜ, ಗೊಬ್ಬರ, ಕೃಷಿ ಸಾಲ ಸೌಲಭ್ಯಕ್ಕೆ ಇಂತಹ ಸಹಕಾರ ಬ್ಯಾಂಕ್‌ಗಳ ಅವಶ್ಯವಿದೆ. ಸಂಘದ ಚುನಾವಣೆ ಸಂದರ್ಭದಲ್ಲಿ ಸಂಘಗಳು ಇಬ್ಬಾಗ ಆಗುವುದು ಸಾಮಾನ್ಯ. ಎಲ್ಲರೂ ಕೂಡಿಕೊಂಡು ಸಂಘ ಕಟ್ಟಿ ಬೆಳೆಸಬೇಕಾಗಿದೆ ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಪ್ರಭುರಾಜ ಪಾಟೀಲ್, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶರಣಪ್ಪ ಬಣ್ಣದಬಾವಿ, ಬಸವರಾಜ ರಾಜೂರು, ರಾಜೇಂದ್ರಕುಮಾರ ಶೆಟ್ಟರ್, ಪ್ರಮುಖರಾದ ಶಿವಕುಮಾರ ನಾಗಲಾಪುರಮಠ, ಶರಣಪ್ಪ ರಾಂಪೂರ, ರತನ್ ದೇಸಾಯಿ, ಗುತ್ತಿಗೆದಾರ ಶಿವಮೂರ್ತಿ, ಶ್ರೀಧರ್ ಕುಲಕರ್ಣಿ, ಕಾರ್ಯದರ್ಶಿ ಶರಣಪ್ಪ ದೇವರಮನಿ, ವಿನಾಯಕ ಬಳಗೇರಿ ಇತರರಿದ್ದರು.