ಕುಕನೂರು ಪಟ್ಟಣದ ಪಪಂನಿಂದ ನಡೆದ ಪೌರ ಕಾರ್ಮಿಕರ ದಿನಾಚರಣೆ ಜಾಥಕ್ಕೆ ಪಪಂ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ ಚಾಲನೆ ನೀಡಿದರು. ಉದ್ಯಮಿ ಅನಿಲ್ ಆಚಾರ್, ಪ್ರಮುಖರಾದ ಮಂಜುನಾಥ ಯಡಿಯಾಪೂರ, ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ಇದ್ದರು.  
ಜಿಲ್ಲೆ

ದೇಶದ ಶುದ್ಧತೆಗೆ ಕೂಡುಗೆ ಅಪಾರ

ಕುರುವತ್ತಿ ಶ್ರೀಕಾಂತಪ್ಪ

ಕುಕನೂರು: ಒಂದು ದೇಶ ಸ್ವಚ್ಚ, ಸುಂದರ, ಆರೋಗ್ಯವಾಗಿರಬೇಕಾದರೆ ಪೌರ ಕಾರ್ಮಿಕರ ಶ್ರಮ ಮಹತ್ವದಾಗಿದೆ ಎಂದು ಪಪಂ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ ಹೇಳಿದರು.

ಪಟ್ಟಣದ ಪಪಂನಿಂದ ನಡೆದ ಪೌರ ಕಾರ್ಮಿಕರ ದಿನಾಚರಣೆಯ ಜಾಥಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಪಪಂನಲ್ಲಿ ಕೆಲಸ ನಿರ್ವಹಿಸುತ್ತಿರುವ ಅವರು ಸರ್ಕಾರದ ಅಂಗವಾಗಿದ್ದು, ಅವರು ಪ್ರತಿನಿತ್ಯ ಮಳೆ, ಚಳಿ, ಗಾಳಿ ಎನ್ನದೆ ಬೆಳಗ್ಗೆ ಎದ್ದು ಪಟ್ಟಣ ಪ್ರಮುಖ ರಸ್ತೆ, ವಾರ್ಡ್‌ಗಳಲ್ಲಿ ಸ್ವಚ್ಛ ಮಾಡುತ್ತಾರೆ. ಆರೋಗ್ಯವನ್ನು ಲೆಕ್ಕಿಸದೆ ಕೆಲಸ ಮಾಡುವ ಇವರು ನಿಜಕ್ಕೂ ಸಾರ್ವಜನಿಕರ ಪಾಲಿಕ ರಕ್ಷಕರು ಎಂದರು.

ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಉದ್ಯಮಿ ಅನಿಲ್ ಆಚಾರ್, ಪಪಂ ಸದಸ್ಯರಾದ ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ಪ್ರಮುಖರಾದ ಮಂಜುನಾಥ ಯಡಿಯಾಪೂರ, ವೀರೇಶ ಸಬರದ, ಮಾಲತೇಶ ಮುಧೋಳ, ಮಾಲತೇಶ ಹೂಗಾರ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷೆ ಈರಮ್ಮ ಘಾಟಿ, ಸಿಬ್ಬಂದಿಗಳಾದ ರಮೇಶ ಅಕ್ಕಿ, ಮಂಜುನಾಥ ಪೊಲೀಸ್ ಪಾಟೀಲ್, ಕೋಟ್ರಯ್ಯ ಕೆಂಭಾವಿಮಠ, ಬಸವರಾಜ ಆರುಬೆರಳ್ಳಿನ್, ಶರಣಪ್ಪ ಯತ್ನಳ್ಳಿ, ಪ್ರಕಾಶ ಬಂಡಿ, ಕನಕಪ್ಪ ಚಲವಾದಿ,ಶ್ರೀಕಾಂತ ಬಾರಿಗಿಡದ, ಉಮೇಶ ಚಲವಾದಿ, ಶಿವು ಆರುಬೆರಳ್ಳಿನ್ ಇತರರಿದ್ದರು.