ಕುಕನೂರು: ತಾಲೂಕಿನ ಬನ್ನಿಕೊಪ್ಪ ಗ್ರಾಮದ ರೈತರ 19.09 ಎಕರೆ ಭೂಮಿಯ ಪಹಣಿಯಲ್ಲಿ ವಕ್ಫ್ ಹೆಸರು ಎಂಬುದು ನಮೂದುಗೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಬನ್ನಿಕೊಪ್ಪ ಗ್ರಾಮದ ಶರಣಪ್ಪಗೌಡ ಹಾಗೂ ಅವರ ತಂದೆ ಶಿವನಗೌಡ ವೀರಪ್ಪಗೌಡ ಅವರ 9.25 ಎಕರೆ ಹಾಗೂ ರಾಮನಗೌಡ, ಅವರ ತಂದೆ ಶಿವನಗೌಡ ವೀರಪ್ಪಗೌಡ ಅವರ 9.24 ಎಕರೆ ಭೂಮಿ ಪಹಣಿಯಲ್ಲಿ ವಕ್ಫ್ ಹೆಸರು ಸೇರಿದೆ. ಇದಕ್ಕೆ ರೈತರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಪಹಣಿಯಲ್ಲಿನ ವಕ್ಫ್ ಪದವನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಭೂಮಿಯ ಪಕ್ಕದಲ್ಲಿ ಮುಸ್ಲಿಂ ಸಮಾಜದ ಭೂಮಿ ಇತ್ತು. ಅದನ್ನು ಸೇರಿಸುವ ಬದಲು ನಮ್ಮ ಆಸ್ತಿಯನ್ನು ವಕ್ಫ್ ಆಸ್ತಿಗೆ 2021-22ರಲ್ಲಿ ಸೇರ್ಪಡೆ ಮಾಡಿದ್ದಾರೆ. ಕೂಡಲೇ ವಕ್ಫ್ ಪದವನ್ನು ತೆಗೆದು ಹಾಕಬೇಕು. ಶರಣಪ್ಪಗೌಡ ವೀರಪ್ಪಗೌಡ ರೈತ ಬನ್ನಿಕೊಪ್ಪ