ಕುಕನೂರು: ಯಲಬುರ್ಗಾ, ಕುಕನೂರು ತಾಲೂಕಿಗೆ ಹೋಸದಾಗಿ 20 ಬಸ್‌ಗಳನ್ನು ಮಂಜೂರು ಮಾಡಿಸುವುದಾಗಿ ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಕುಕನೂರಿನಿಂದ ಕಾಗಿನೆಲ, ಯಲಬುರ್ಗಾದಿಂದ ಬೀದರ್, ಕುಕನೂರಿನಿಂದ ಧರ್ಮಸ್ಥಳ ನೂತನ ಮಾರ್ಗಗಳಿಗೆ ಸಂಚರಿಸುವ ಬಸ್‌ಗಳಿಗೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.
ಕುಕನೂರು, ಯಲಬುರ್ಗಾ ತಾಲೂಕಿನ ಯಾವ ಗ್ರಾಮಗಳಿಗೆ ಸಂಚರಿಸಲು ತೊಂದರೆ ಇದೆಯೋ ಆ ಗ್ರಾಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು. ಬಸ್ ನಿಲ್ದಾಣ ಸುತ್ತ ಕಾಂಪೌಂಡ್ ನಿರ್ಮಾಣ, ಆರ್‌ಒ ಪ್ಲಾಂಟ್ ಅಳವಡಿಕೆಗೆ ಅನುದಾನ ನೀಡಲಾಗುವುದು. ಎಲ್ಲ ಗ್ರಾಮಗಳ ಬಸ್ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು. ಯಲಬುರ್ಗಾ, ಕುಕನೂರು ತಾಲೂಕಿನ ಕೆಲವು ನಿಲ್ದಾಣಗಳಿಗೆ ಬಣ್ಣ ಹಚ್ಚಿಸುವ ಕೆಲಸ ಮಾಡಿಸುವುದಾಗಿ ಹೇಳಿದರು.
ಪಪಂ ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ್, ಪಪಂ ಸದಸ್ಯರಾದ ರಾಮಣ್ಣ ಬಂಕದಮನಿ, ಸಿರಾಜ ಕರಮುಡಿ, ನೂರುದ್ದೀನಸಾಬ್ ಗುಡಿಹಿಂದಲ್, ಗಗನ ನೋಟಗಾರ, ಪ್ರಮುಖರಾದ ನಾರಾಯಣಪ್ಪ ಹರಪನಹಳ್ಳಿ, ಹನುಮಂತಗೌಡ ಚಂಡೂರು, ಕೆರಿಬಸಪ್ಪ ನಿಡಗುಂದಿ, ಸಿದ್ದಯ್ಯ ಕಳ್ಳಿಮಠ, ಮಂಜುನಾಥ ಕಡೆಮನಿ, ಶಿವನಗೌಡ ದಾನರೆಡ್ಡಿ, ಸಂಗಮೇಶ ಗುತ್ತಿ, ರಾಘವೇಂದ್ರ ಕಾತರಕಿ, ಕೆಕೆಆರ್‌ಟಿಸಿ ಅಧಿಕಾರಿಗಳು, ಚಾಲಕರು, ನಿರ್ವಾಹಕರು, ಇತರರಿದ್ದರು.