ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಾ ವಿರುದ್ಧ ಆಕ್ರೋಶ
ಕುಕನೂರು: ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಾ ಹೇಳಿಕೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕೆಂದು ತಾಲೂಕು ಹಿಂದು ಜಾಗರಣ ವೇದಿಕೆ ಸಂಘಟನಾ ಕಾರ್ಯದರ್ಶಿ ಮಂಜುನಾಥ ಬಡಿಗೇರ ಒತ್ತಾಯಿಸಿದರು.
ಅಮೂಲ್ಯಾ ವಿರುದ್ಧ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ವೀರಭದ್ರಪ್ಪ ವೃತ್ತದಲ್ಲಿ ಉಪತಹಸೀಲ್ದಾರ್ ಸುರೇಶ ಮೂರಂಕಣದರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಅಮೂಲ್ಯಾ ಹಿಂದೆ ಕಾಣದ ಕೈಗಳು ರಾಷ್ಟ್ರದ್ರೋಹಿ ಕಾರ್ಯದಲ್ಲಿ ತೊಡೆಗಿವೆ. ಅವರು ಸಹ ನೆಲಸಮವಾಗಬೇಕು. ಪಾಕ್ ಪರ ಹೇಳಿಕೆ ಕೂಗುತ್ತಾರೆಂದರೆ ಒಳಗಿನವರ ಕುಮ್ಮಕ್ಕು ಎದ್ದು ಕಾಣುತ್ತದೆ. ಇಂಥ ಘಟನೆ ಮರುಕಳಿಸಬಾರದೆಂದು ಒತ್ತಾಯಿಸಿದರು.
\
ಅನ್ನದಾನೀಶ್ವರ ಶಾಖಾಮಠದ ಶ್ರೀ ಮಹಾದೇವ ದೇವರು ಮಾತನಾಡಿ, ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಾ ಹೇಳಿಕೆಯನ್ನು ಕುಕನೂರಿನ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸಿರುವುದು ಗಮನಕ್ಕೆ ಬಂದಿದೆ. ಅಂತಹ ದುಷ್ಕೃತ್ಯಕ್ಕೆ ಯಾರೊಬ್ಬರೂ ಮುಂದಾಗಬಾರದು. ಅಂಥ ಘಟನೆ ಬೆಳಕಿಗೆ ಬಂದಲ್ಲಿ ಮುಂದಿನ ದಿನದಲ್ಲಿ ಅಂತವರ ಮನೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ ಮಾತನಾಡಿದರು. ಹಿಂದು ಜಾಗರಣಾ ವೇದಿಕೆಯ ತಾಲೂಕಾಧ್ಯಕ್ಷ ರಾಜಶೇಖರ ದ್ಯಾಂಪೂರು, ಉಪಾಧ್ಯಕ್ಷ ವಿನಯ ಸರಗಣಾಚಾರ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕಾಳಿ, ಕುಕನೂರು ಘಟಕ ಅಧ್ಯಕ್ಷ ಕುಮಾರ ಹಾಳಕೇರ, ಉಪಾಧ್ಯಕ್ಷ ಶಶಿ ಭಜಂತ್ರಿ, ಕಾರ್ಯದರ್ಶಿ ಬಸವರಾಜ ಉಮಚಗಿ, ಪ್ರಮುಖರಾದ ಅಶೋಕ, ಅಭಿ, ವಿನೋಧ, ರಾಮ, ಉಮೇಶ, ಹನುಮಂತ ಗೊರ್ಲೆಕೊಪ್ಪ, ಅಶೋಕ ಜಗ್ಗಲ್, ವೀರೇಶ ಸಬರದ, ಈರಣ್ಣ ಸಿದ್ನೇಕೊಪ್ಪ ಇತರರಿದ್ದರು.