ಜಿಲ್ಲೆ

ಕಡಲೆ ಉತ್ಪನ್ನದ ಹಣ ಶೀಘ್ರ ನೀಡಿ

ಉಪ ತಹಸೀಲ್ದಾರ್ ಸುರೇಶ ಮೂರಂಕಣದರಿಗೆ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಮನವಿ

ಕುಕನೂರು: ಬೆಂಬಲ ಬೆಲೆಯಲ್ಲಿ ರೈತರಿಂದ ಖರೀದಿಸಿದ ಕಡಲೆ ಉತ್ಪನ್ನದ ಹಣವನ್ನು ಸರ್ಕಾರ ಕೂಡಲೇ ರೈತರಿಗೆ ನೀಡಬೇಕೆಂದು ಒತ್ತಾಯಿಸಿ ಪಟ್ಟಣದ ತಹಸಿಲ್ ಕಚೇರಿಯಲ್ಲಿ ಉಪ ತಹಸೀಲ್ದಾರ್ ಸುರೇಶ ಮೂರಂಕಣದರಿಗೆ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಅಂದಪ್ಪ ಕೋಳೂರು ಶುಕ್ರವಾರ ಮನವಿ ಸಲ್ಲಿಸಿದರು.

ರೈತರಾದ ಈಶಯ್ಯ ಶಿರೂರಮಠ, ಶಶಿಧರ ಮಾದಿನೂರು, ಚನ್ನಪ್ಪ ನಾಲವಾಡ, ಕಿರಣ ಸಿಳ್ಳಿನ ಇತರರಿದ್ದರು.

ನಂತರ ಮಾತನಾಡಿ, ಏಪ್ರಿಲ್‌ನಲ್ಲಿ ಬೆಂಬಲ ಬೆಲೆಯಲ್ಲಿ ಸರ್ಕಾರ ಕಡಲೆ ಉತ್ಪನ್ನ ಖರೀದಿ ಮಾಡಿದೆ. ಬೆಳೆಯ ಖರ್ಚು ಸೇರಿ ಅವುಗಳ ಸಂಗ್ರಹ, ಜೋಪಾನ ಮಾಡಿ ಬೆಂಬಲ ಬೆಲೆಗೆ ಮಾರಿದ್ದಾರೆ. ಈಗಾಗಲೇ ಮುಂಗಾರು ಮಳೆ ಆಗುತ್ತಿದೆ. ಇದರಿಂದ ರೈತರಿಗೆ ಭೂಮಿ ಉಳುಮೆ ಮಾಡಲು ಖರ್ಚು ತಗಲುತ್ತದೆ. ಕರೊನಾ ಲಾಕ್‌ಡೌನ್ ಹಿನ್ನೆಲೆ ಸರ್ಕಾರ ನಾನಾ ಪ್ಯಾಕೇಜ್ ಘೋಷಿಸುತ್ತಿದೆ. ಅದರಂತೆ ಕಡಲೆಯ ಹಣವನ್ನು ಸರ್ಕಾರ ರೈತರಿಗೆ ಕೂಡಲೇ ಒದಗಿಸಿದರೆ ಅನುಕೂಲ ಆಗುತ್ತದೆ. ಅಲ್ಲದೆ, ಇನ್ನಿತರೆ ಬೆಂಬಲ ಬೆಲೆಯಲ್ಲಿ ಖರೀದಿಸಿದ ಬೆಳೆಗಳ ಹಣವನ್ನು ಶೀಘ್ರವಾಗಿ ರೈತರಿಗೆ ತಲುಪಿಸಬೇಕು ಒತ್ತಾಯಿಸಿದರು.