ಜಿಲ್ಲೆ

ಕುದ್ರುಬೀಡು ಶ್ರೀ ಉಮಾಮಹೇಶ್ವರ ದೇವಳ ವರ್ಧಂತಿ ಸಂಪನ್ನ

ವಿಜಯವಾಣಿ ಸುದ್ದಿಜಾಲ ಆರ್ಡಿ

ಇಲ್ಲಿಗೆ ಸಮೀಪದ ಕುದ್ರುಬೀಡು ಕೊಳ್ಕೆಬೈಲು ಶ್ರೀ ಉಮಾಮಹೇಶ್ವರ ಮಹಾಗಣಪತಿ ಸಪರಿವಾರ ದೇವರ ವಾರ್ಷಿಕ ಪ್ರತಿಷ್ಠಾಪನಾ ವರ್ಧಂತಿ ಭಾನುವಾರ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.

ಬೆಳಗ್ಗೆ ಗುರು ಗಣಪತಿ ಪೂಜೆ, ಪುಣ್ಯಾಹ ವಾಚನ, ಮಹಾಸಂಕಲ್ಪ, ಉಮಾಮಹೇಶ್ವರ ದೇವರಿಗೆ ಪಂಚವಿಶಂತಿ ದ್ರವ್ಯ ಕಲಶ ಪ್ರತಿಷ್ಠಾಪನಾ, ಪುರಸ್ಸರ ಕಲಾತತ್ವ ಹೋಮ, ಗಣಪತಿ ಹಾಗೂ ನಾಗದೇವರಿಗೆ ನವಕ ಪ್ರಧಾನ ಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಮಹಾರಂಗ ಪೂಜೆ, ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಮಹಾಮಂತ್ರಿ ದುಷ್ಟ ಬುದ್ಧಿ’ ಕಾಲಮಿತಿ ಯಕ್ಷಗಾನ ನಡೆಯಿತು.

ತಂತ್ರಿ ಗಿರೀಶ್ ಸೋಮಾಯಾಜಿ ಪಡುವಳ್ಳಿ, ಪ್ರಧಾನ ಅರ್ಚಕ ಮಹಾಬಲೇಶ್ವರ ಭಟ್, ಆಡಳಿತ ಮಂಡಳಿ ಅಧ್ಯಕ್ಷ ಅಶೋಕ ಹೆಗ್ಡೆ ಬೆಪ್ಡೆ, ಗೌರವಾಧ್ಯಕ್ಷ ಎ.ರತ್ನಾಕರ ಶೆಟ್ಟಿ ಕುದ್ರುಬೀಡು, ದಯಾನಂದ ರಾಮಣ್ಣ ಶೆಟ್ಟಿ ಕೆರ್ಜಾಡಿ ದೊಡ್ಮನೆ, ಕಾರ್ಯಾಧ್ಯಕ್ಷ ಕೆರ್ಜಾಡಿ ದೊಡ್ಮನೆ ಸೀತಾರಾಮ ಹೆಗ್ಡೆ, ಕಾರ್ಯದರ್ಶಿ ಬೆಪ್ಡೆ ಬ್ರಾಹ್ಮಣರಬೆಟ್ಟು ರತ್ನಾಕರ ಶೆಟ್ಟಿ, ಖಜಾಂಚಿ ಕೆರ್ಜಾಡಿ ದೊಡ್ಮನೆ ಕೆ.ಜಯಂತ ಹೆಗ್ಡೆ, ಸದಸ್ಯರಾದ ಮೋಹನದಾಸ್ ಹೆಗ್ಡೆ ಯಡ್ದೆ, ರತಿ ಶೆಡ್ತಿ ಬೆಪ್ಡೆ, ಉದಯ ಶೆಟ್ಟಿ ಬಾಗಳಮಕ್ಕಿ, ಉದಯಕುಮಾರ್ ಶೆಟ್ಟಿ ಕೆಸ್ಕಾರಜೆಡ್ಡು, ಸದಾನಂದ ಪೂಜಾರಿ ಚೇರ್ಕಳ, ಆನಂದ ಪೂಜಾರಿ ಗುಡ್ಡೆಯಂಗಡಿ, ಸೀತಾರಾಮ ಪೂಜಾರಿ ಹೊಗೆಹೊಳೆ, ರಾಮ ಪೂಜಾರಿ ಕೋಟೇಶ್ವರ, ವಿನಯ ಶೆಟ್ಟಿ ಆರ್ಡಿ, ಸತೀಶ್ ಶೆಟ್ಟಿ, (ಮಿಟ್ಟಿ) ಗುಡ್ಡೆಯಂಗಡಿ, ಸುದರ್ಶನ ಶೆಟ್ಟಿ ಆರ್ಡಿ, ರಾಜೀವ ಕುಲಾಲ ಬೆಪ್ಡೆ, ಪ್ರಹ್ಲಾದ್ ಶೆಟ್ಟಿ ಆರ್ಡಿ, ನಾಗ ಚಾವಣಿಹಾಡಿ, ಬೆಪ್ಡೆ ಶ್ರೀ ಉಮಾಮಹೇಶ್ವರ ಮಹಾಗಣಪತಿ ಪುರುಷ ಹಾಗೂ ಮಹಿಳಾ ಭಜನಾ ಮಂಡಳಿಯವರು, ಊರ ಪರವೂರ ಭಕ್ತಾಧಿಗಳು ಪಾಲ್ಗೊಂಡಿದ್ದರು.