ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಿಕ್ಷಕ ಸೇವಾ ರತ್ನ ಪ್ರಶಸ್ತಿಗೆ ಭಾಜನರಾದ ಸುನೀಲ್ ದೇವ್‌ಕುಮಾರ್ ಅವರನ್ನು ಪ್ರಜಾಸತ್ತಾತ್ಮಕ ಒಕ್ಕೂಟದಿಂದ ಸನ್ಮಾನಿಸಲಾಯಿತು. ಒಕ್ಕೂಟದ ಬಸವಣ್ಣ, ಜಯಶಂಕರ್, ರೇಚಣ್ಣ, ರಾಜೇಶ್ ಇತರರಿದ್ದರು.  
ಜಿಲ್ಲೆ

ಶಿಕ್ಷಕ ಸುನೀಲ್‌ದೇವ್‌ಕುಮಾರ್‌ಗೆ ಸನ್ಮಾನ

ಮಾದೇಶ್ ತಿ.ನರಸೀಪುರ

ಯಳಂದೂರು: ತಾಲೂಕಿನ ಕೆಸ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಸುನೀಲ್‌ದೇವ್ ಕುಮಾರ್ ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ತಾಲೂಕು ಪ್ರಜಾಸತ್ತಾತ್ಮಕ ನೌಕರರ ಒಕ್ಕೂಟದ ವತಿಯಿಂದ ಶುಕ್ರವಾರ ಕೆಸ್ತೂರು ಶಾಲೆಯಲ್ಲಿ ಸನ್ಮಾನಿಸಲಾಯಿತು.

ಒಕ್ಕೂಟದ ಬಸವಣ್ಣ ಈ ಸಂದರ್ಭದಲ್ಲಿ ಮಾತನಾಡಿ, ಸುನೀಲ್‌ದೇವ್‌ಕುಮಾರ್‌ಗೆ ಈ ಪ್ರಶಸ್ತಿ ಲಭಿಸಿರುವುದು ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ. ಅನೇಕ ವರ್ಷಗಳಿಂದಲೂ ಇವರು ತಾಲೂಕಿನಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಕಲಿಕೆಯಲ್ಲಿ ಇವರ ಸೇವೆ ಗಣನೀಯವಾಗಿದ್ದು, ಇತರರಿಗೆ ಮಾದರಿಯಾಗಲಿ ಎಂದು ಆಶಿಸಿದರು.

ಒಕ್ಕೂಟದ ಸದಸ್ಯರಾದ ಸತೀಶ್, ರೇಚಣ್ಣ, ಜಯಶಂಕರ್, ರಾಜೇಶ್, ವರದರಾಜು, ದೊರೆಸ್ವಾಮಿ, ಬಸವಣ್ಣ, ನಾಗರಾಜು ಸೇರಿದಂತೆ ಇತರರು ಹಾಜರಿದ್ದರು.