ಜಿಲ್ಲೆ

ಆಚಾರ್ಯರಿಗೆ ನುಡಿನಮನ

ಮರಿದೇವ ಹೂಗಾರ

ಹುಬ್ಬಳ್ಳಿ: ಹಿರಿಯ ಜೈನಾಚಾರ್ಯ ಸಂತ ಶಿರೋಮಣಿ ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರು ಸಮಾಧಿಮರಣ ಹೊಂದಿದ ಹಿನ್ನೆಲೆಯಲ್ಲಿ ನಗರದಲ್ಲಿ ದಿಗಂಬರ ಜೈನ ಸಮಾಜದಿಂದ ಭಾನುವಾರ ನುಡಿನಮನ ಸಲ್ಲಿಸಲಾಯಿತು.
ಆಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ನಮನ ಸಲ್ಲಿಸಿ, ಮೌನ ಆಚರಿಸಿ, ಣಮೋಕಾರ ಮಂತ್ರ ಪಠಿಸಲಾಯಿತು. ಶಾಂತಿನಾಥ ಹೋತಪೇಟಿ ಅವರು ನುಡಿನಮನ ಸಲ್ಲಿಸಿದರು. ಧನ್ಯಕುಮಾರ ಖಿವಡೆ, ಧರಣೇಂದ್ರ ಜವಳಿ, ಸುಭಾಷ ಹೊಸಮನಿ, ಮಹಾವೀರ ಗೊಂಗಡಿ, ಧನಪಾಲ ಮುನ್ನೊಳ್ಳಿ, ರಾಜಶ್ರೀ ಕುಸನಾಳೆ, ವಿಮಲ ತಾಳಿಕೋಟಿ, ಸುಧಾ ಶಿರಗುಪ್ಪಿ, ಭಾರತಿ ಹಿರೇಗೌಡರ, ಇತರರು ಇದ್ದರು.