ಕೂಡ್ಲಿಗಿ: ಮದುವೆ, ಸಭೆ, ಸಮಾರಂಭಗಳ ಫೋಟೊ, ವಿಡಿಯೋ ಸೆರೆ ಹಿಡಿದು ಸುಂದರವಾಗಿ ಕಟ್ಟಿಕೊಡುವುದು ಒಂದು ಕಲೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಛಾಯಾಗ್ರಾಹಕರ ಸಂಘ ಹಮ್ಮಿಕೊಂಡ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಫೋಟೋಗ್ರಫಿ ಇಂದು ಅತ್ಯುನ್ನತವಾಗಿ ಬೆಳೆದಿದ್ದು, ಎಲ್ಲ ರಂಗದಲ್ಲೂ ಛಾಪು ಮೂಡಿಸಿದೆ. ವೈದ್ಯಕೀಯ ಕ್ಷೇತ್ರದಲ್ಲೂ ತುಂಬ ಮುಖ್ಯವಾಗಿ ಬೇಕಾಗಿದೆ. ಅವಿಸ್ಮರಣೀಯ ಘಟನೆಗಳನ್ನು ಸ್ಮರಣೀಯವಾಗಿಸುವಲ್ಲಿ ಫೋಟೋಗ್ರಫಿ ಹಾಗೂ ಫೋಟೋಗ್ರಾಫರ್ ಅವರ ಕೈಚಳಕ ಮೆಚ್ಚಲೇ ಬೇಕು ಎಂದರು.
ಇದನ್ನೂ ಓದಿ: ಬಸವಕಲ್ಯಾಣದಲ್ಲಿ ಫೋಟೋಗ್ರಾಫರ್ ದಿನಾಚರಣೆ
ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯರು ಮಾತಾನಾಡಿ, ಒಂದು ಫೋಟೋ ಸಾವಿರ ಪದಗಳಿಗೆ ಸಮನಾಗಿದ್ದು, ನಮ್ಮ ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲದ ಸನ್ನಿವೇಶಗಳನ್ನು ಛಾಯಾಚಿತ್ರ ನಿರ್ಧರಿಸುತ್ತದೆ. ಫೋಟೋಗ್ರಾಫರ್‌ಗಳ ಬದುಕು ಕತ್ತಲಲ್ಲಿ ಇದ್ದರೂ ಇತರರ ಜೀವನವನ್ನೂ ಅತ್ಯಂತ ಸುಂದರವಾಗಿಸಲು ಶ್ರಮಪಡುತ್ತಾರೆ ಎಂದರು.
ಛಾಯಾಗ್ರಾಹಕರ ಭವನ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಹಿರಿಯ ಛಾಯಾಗ್ರಾಹಕರ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.
ತಹಸೀಲ್ದಾರ್ ಟಿ.ಜಗದೀಶ್, ಪ್ರಮುಖರಾದ ಕಾವಲಿ ಶಿವಪ್ಪನಾಯಕ, ಹಡಗಲಿ ವೀರಭದ್ರಪ್ಪ, ಬಣವಿಕಲ್ಲು ಎರಿಸ್ವಾಮಿ, ಛಾಯಾಗ್ರಾಹಕರ ಸಂಘದ ತಾಲೂಕು ಅಧ್ಯಕ್ಷ ಎ.ಎಂ.ಸೋಮಶೇಖರಯ್ಯ, ಹರಪನಹಳ್ಳಿ ಯೋಗೀಶ್, ಕುಮಾರಸ್ವಾಮಿ, ಛಾಯಾಗ್ರಾಹಕರ ಸಂಘದ ರಾಜ್ಯ ಒಕ್ಕೂಟದ ಉಪಾಧ್ಯಕ್ಷ ಕೆ.ರಾಮಣ್ಣ, ಛಾಯಾಗ್ರಾಹಕರಾದ ಮಹೇಶ ಗೌಡ, ಚಂದ್ರಕುಮಾರ್, ಹನುಮಂತ, ಗಣೇಶ, ಶರಣನಗೌಡ, ವೆಂಕಟೇಶ್, ಲೋಕೇಶ್, ವಿದ್ಯಾಧರ, ಗೆದ್ದಲಗಟ್ಟೆ ಮಹೇಶ, ಪ್ರಕಾಶ, ನಾಗರಾಜಯ್ಯ, ಶಿವು ಇತರರಿದ್ದರು.