ಜಿಲ್ಲೆ

ಕೂಡ್ಲಿಗಿಗೆ ಮೂರನೇ ಸ್ಥಾನ

ರುದ್ರಪ್ಪ ವಾಲಿ

ಕೂಡ್ಲಿಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಶೇ. 67.56 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಬಿಇಒ ಪದ್ಮನಾಭ ಕರಣಂ ತಿಳಿಸಿದ್ದಾರೆ.

ಒಟ್ಟು 4,788 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 3,235 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 2,439 ಬಾಲಕರಲ್ಲಿ, 1507 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2,349ಬಾಲಕಿಯರು ಪರೀಕ್ಷೆ ಬರೆದಿದ್ದು, 1728 ಬಾಲಕಿಯರು ಉತ್ತೀರ್ಣರಾಗಿದ್ದು, ಜಿಲ್ಲೆಗೆ ಮೂರನೇ ಸ್ಥಾನ ಪಡೆದಿದೆ.