ಕೂಡ್ಲಿಗಿ: ಕರೊನಾ ವೈರಸ್ ತಡೆಗೆ ತಾಲೂಕಿನ ವಿವಿಧ ಹಳ್ಳಿಗಳ ರಸ್ತೆಗಳಲ್ಲಿ ಸ್ಥಳೀಯರು ಬೇಲಿ ಹಾಕಿ ಹೊರಗಿನವರ ಪ್ರೇವೇಶಕ್ಕೆ ನಿಷೇಧ ಹೇರಿದ್ದಾರೆ. ತಾಲೂಕಿನ ಪೂಜಾರಹಳ್ಳಿ ತಾಂಡಾ, ಸಿದ್ದಾಪುರ, ಕ್ಯಾಸನಕೆರೆ, ಅಮ್ಮನಕೆರೆ, ಗಾಣಗಟ್ಟೆ ಸೇರಿ ಇತರ ಗ್ರಾಮ ಪ್ರವೇಶಿಸುವ ರಸ್ತೆಗಳಿಗೆ ಬೇಲಿ ಹಾಕಿ, ಗ್ರಾಮದಿಂದ ಹೊರಹೋಗುವ ಹಾಗೂ ಒಳ ಬರುವವರಿಗೆ ನಿಷೇಧ ಹೇರಿದ್ದಾರೆ. ಅಲ್ಲದೆ, ಹಳ್ಳಿ ಕಟ್ಟೆಗಳ ಮೇಲೆ ಜನ ಗುಂಪಾಗಿ ಸೇರುವುದನ್ನು ತಪ್ಪಿಸಲು ಡಾಂಬಾರು ಎಣ್ಣೆ, ಕೀಲೆಣ್ಣೆ ಹಾಕುತ್ತಿದ್ದಾರೆ.
ಮನೆಯಲ್ಲೇ ಇರಿ: ಗ್ರಾಮಗಳಿಗೆ ಬೇಲಿ ಹಾಕದೆ ಎಲ್ಲರೂ ಮನೆಯಲ್ಲಿಯೇ ಇರಬೇಕು. ಅನವಶ್ಯಕವಾಗಿ ಓಡಾಡಬಾರದು. ಹೊರಗಿನಿಂದ ಯಾರದರೂ ಬಂದರೆ ಅಂಥವರ ಬಗ್ಗೆ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಬೇಕು ಎಂದು ತಹಸೀಲ್ದಾರ್ ಎಸ್.ಮಹಾಬಲೇಶ್ವರ ತಿಳಿಸಿದ್ದಾರೆ.