ಕೂಡ್ಲಿಗಿ ತಾಲೂಕ ಕಚೇರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸಸಿ ನೆಟ್ಟರು. ತಹಸೀಲ್ದಾರ್ ವಿ.ಕೆ. ನೇತ್ರಾವತಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೆ.ಟಿ.ಲತಾ ಇತರರಿದ್ದರು. 
ಜಿಲ್ಲೆ

ಪರಿಸರ ದಿನ ಅರ್ಥಪೂರ್ಣವಾಗಿಸೋಣ

ಶ್ರೀನಾಥ

ಕೂಡ್ಲಿಗಿ: ಪ್ರತಿಯೊಬ್ಬರೂ ಗಿಡ ನೆಟ್ಟು ಬೆಳೆಸುವ ಕಾರ್ಯ ಮಾಡಬೇಕು ಎಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.

ತಾಲೂಕು ಆಡಳಿತ ಹಾಗೂ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲರೂ ಒಂದೊಂದು ಗಿಡ ನೆಟ್ಟು ಬೆಳೆಸುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿಸಬೇಕು ಎಂದು ಹೇಳಿದರು.

ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಕೆ.ಟಿ.ಲತಾ ಮಾತನಾಡಿ, ಅರಣ್ಯ ಇಲಾಖೆಯಿಂದ ಸಸಿಗಳನ್ನು ನೆಡಲಾಗುತ್ತದೆ. ಈ ಗಿಡಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು, ನಾವೆಲ್ಲ ಸೇರಿ ಗಿಡಗಳನ್ನು ಮರಗಳನ್ನಾಗಿಸಿ ಪರಿಸರ ಹಸಿರಾಗಿರುವಂತೆ ಮಾಡಬೇಕು ಎಂದರು.

ಅರಣ್ಯಧಿಕಾರಿಗಳಾದ ಮಧುಸೂದನ್, ಹೇಮಚಂದ್ರ, ಎ.ನಾಗರಾಜ, ಗೋವಿಂದಪ್ಪ, ಶಿರಸ್ತೇದಾರ್ ಎಸ್.ಚಂದ್ರಶೇಖರ್, ಕಂದಾಯ ನಿರೀಕ್ಷಕ ಕುಮಾರಸ್ವಾಮಿ, ಗ್ರಾಮ ಆಡಳಿತಾಧಿಕಾರಿಗಳಾದ ಪ್ರಭು, ಶಿವಕುಮಾರ್ ಗೌಡ, ಎಂ.ಪ್ರಸನ್ನಕುಮಾರ್, ಪ್ರಾಚಾರ್ಯೆ ಟಿ.ಕೊತ್ಲಮ್ಮ, ಉಪನ್ಯಾಸಕರಾದ ನಾಗರಾಜ ಕೊಟ್ರಪ್ಪಗಳ, ಚಾಂದಪೀರ್, ಸುಮಾ, ನಾಗರತ್ನ, ಸ.ಪ.ಪೂ.ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.