ಕೂಡ್ಲಿಗಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಪುನೀತ್ ರಾಜಕುಮಾರ್ ಜನ್ಮದಿನ ಆಚರಿಸಲಾಯಿತು. ಬಿಜೆಪಿ ವೃತ್ತಿ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಗುಳಿಗೆ ವೀರೇಂದ್ರ ಕುಮಾರ್, ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಅಭಿಮಾನಿ ಬಳಗದ ಅಜಯ್ ನಿರ್ಕಲ್, ಪಪಂ ಸದಸ್ಯರಾದ ಈಶಪ್ಪ, ಮಂಜುನಾಥ ಇನ್ನಿತರರಿದ್ದರು. 
ಜಿಲ್ಲೆ

ಸಾಧನೆ-ಜನಸೇವೆ ಸದಾ ಸ್ಮರಣೀಯ - ಗುಳಿಗೆ ವೀರೇಂದ್ರ ಕುಮಾರ್ ಅನಿಸಿಕೆ > ಪುನೀತ್ ರಾಜಕುಮಾರ್ ಜನ್ಮದಿನಾಚರಣೆ

ಶ್ರೀನಾಥ

ಕೂಡ್ಲಿಗಿ: ನಟ ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಎಂದೆಂದಿಗೂ ಅಮರವಾಗಿದ್ದಾರೆ ಎಂದು ಬಿಜೆಪಿ ವೃತ್ತಿ ಪ್ರಕೋಷ್ಠ ರಾಜ್ಯ ಸಮಿತಿ ಸದಸ್ಯ ಗುಳಿಗೆ ವೀರೇಂದ್ರ ಕುಮಾರ್ ಹೇಳಿದರು.

ಪಟ್ಟಣದ ಪುನೀತ್ ವೃತ್ತದಲ್ಲಿ ಅಪ್ಪು ಅಭಿಮಾನಿ ಬಳಗ ಏರ್ಪಡಿಸಿದ್ದ ಪುನೀತ್ ರಾಜಕುಮಾರ್ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ಮಾತನಾಡಿ, ಅತಿ ಚಿಕ್ಕ ವಯಸ್ಸಿನಲ್ಲಿ ಪುನೀತ್ ರಾಜಕುಮಾರ್ ಮಾಡಿದ ಸಾಧನೆ, ಗಳಿಸಿದ ಜನಪ್ರಿಯತೆ, ಜನಸೇವೆಯನ್ನು ಬಣ್ಣಿಸಲು ಪದಗಳೇ ಸಾಲದು. ಕೂಡ್ಲಿಗಿ ಸರ್ಕಾರಿ ಜ್ಯೂನಿಯರ್ ಕಾಲೇಜಿಗೆ ಒಂದು ಲಕ್ಷ ರೂ. ಧನಸಹಾಯ ಮಾಡಿದ್ದನ್ನು ನಾವು ಸ್ಮರಿಸಬೇಕು. ಅವರ ಆದರ್ಶ ನಮಗೆ ಮಾದರಿಯಾಗಿದೆ ಎಂದರು.

ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಪಪಂ ಸದಸ್ಯರಾದ ಈಶಪ್ಪ, ಸಿರಬಿ ಮಂಜುನಾಥ, ಬಾಸೂ ನಾಯ್ಕ, ಶಾಸಕರ ಆಪ್ತ ಸಹಾಯಕ ಮರುಳಸಿದ್ದಪ್ಪ, ಕೆ.ಎನ್.ದಿನಕರ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸುನೀಲ್ ಗೌಡ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಸ್.ದುರುಗೇಶ್, ಅಜಯ್ ನಿರ್ಕಲ್, ಮಂಜುನಾಥ ಇನ್ನಿತರರಿದ್ದರು.