ಕಂಪ್ಲಿಯಲ್ಲಿ ವಿದ್ಯುತ್ ಮಹೋತ್ಸವನ್ನು ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ ಮಂಗಳವಾರ ಉದ್ಘಾಟಿಸಿದರು.  
ಜಿಲ್ಲೆ

ವಿದ್ಯುತ್ ಬಳಸುವ ಕೌಶಲ ಬೆಳೆಸಿಕೊಳ್ಳಿ

ಕಂಪ್ಲಿ: ವಿದ್ಯುತ್ತನ್ನು ಕೇವಲ ಬೆಳಕಿಗೆ ಉಪಯೋಗಿಸದೆ ಸರ್ವಾಂಗೀಣ ಅಭಿವೃದ್ಧಿಗೆ ಉಪಯೋಗಿಸುವ ಕೌಶಲ ಬೆಳೆಸಿಕೊಳ್ಳಬೇಕಿದೆ ಎಂದು ಕೂಡ್ಲಿಗಿಯ ಎನ್‌ಟಿಪಿಸಿಎಲ್‌ನ ಡಿಜಿಎಂ ಬಿ.ಎಚ್.ಮಲ್ಲಿಕಾರ್ಜುನ ಹೇಳಿದರು.

ಇಲ್ಲಿನ ರಾಘವೇಂದ್ರಸ್ವಾಮಿಗಳ ಶಾಖಾಮಠದಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯುತ್ ಮಹೋತ್ಸವದಲ್ಲಿ ಮಾತನಾಡಿದರು. ಒಂದೇ ರಾಷ್ಟ್ರ, ಒಂದೇ ಜಾಲ ಯೋಜನೆಯನ್ವಯ ದೇಶದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಒದಗಿಸಲಾಗುತ್ತಿದೆ. ವಿದ್ಯುತ್ ಉತ್ಪಾದನಾ ಸಾಮಾರ್ಥ್ಯ ಹೆಚ್ಚಿಸುವ ಜತೆ ವಿತರಣಾ ಜಾಲ ಬಲಪಡಿಸಲಾಗುತ್ತಿದೆ. ನವೀಕರಿಸಬಹುದಾದ ಇಂಧನದ ಉತ್ಪಾದನೆಯಲ್ಲಿ ಉತ್ತಮ ಬೆಳವಣಿಗೆ ಸಾಧಿಸಲಾಗುತ್ತಿದೆ. ಎಲ್ಲರಿಗೂ ವಿದ್ಯುತ್ ದೊರಕಿಸಿಕೊಡುವ ಜತೆಗೆ ವಿದ್ಯುತ್ ಸದ್ಬಳಕೆ ಕುರಿತು ರೈತರು ಸೇರಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ವಿದ್ಯುತ್ ಮಹೋತ್ಸವ ಹಮ್ಮಿಕೊಂಡಿದೆ ಎಂದರು.

ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ನಿರ್ಮಲಾ ಕೆ.ವಸಂತ್, ತಹಸೀಲ್ದಾರ್ ಗೌಸಿಯಾಬೇಗಂ, ಪುರಸಭೆ ಸಿಒ ಡಾ.ಎನ್.ಶಿವಲಿಂಗಪ್ಪ, ರೈತ ಸಂಘದ ಅಧ್ಯಕ್ಷ ಕೊಟ್ಟೂರು ರಮೇಶ್, ತಾಂತ್ರಿಕ ನಿರ್ದೇಶಕ ಬಿ.ಆರ್.ಸೋಮಶೇಖರ್ ಜೆಸ್ಕಾಂ ಅಧೀಕ್ಷಕ ಅಭಿಯಂತರ ವೆಂಕಟೇಶಲು, ಕಾರ್ಯನಿರ್ವಾಹಕ ಅಭಿಯಂತರ ಜಿ.ಜೆ.ಶ್ರೀನಿವಾಸ್, ಎಇಇ ಉಮೇಶ್‌ಕುಮಾರ್, ಅರುಣ್‌ಕುಮಾರ್, ಲೆಕ್ಕಾಧಿಕಾರಿ ಡಿ.ಟಿ.ಹಳ್ಳಿ, ಎಇಗಳಾದ, ಜೆಇ ಇತರರಿದ್ದರು.