ಕೂಡ್ಲಿಗಿ ಆಶ್ರಯ ಕಾಲನಿ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಶಿಬಿರವನ್ನು ಹಿರಿಯ ಆರೋಗ್ಯ ನಿರೀಕ್ಷಕ ಜಗದೀಶ್ ಉದ್ಘಾಟಿಸಿದರು. ಪಪಂ ಸದಸ್ಯೆ ಎಂ.ಶಾರದಾ ಬಾಯಿ, ಕಿರಿಯ ಆರೋಗ್ಯ ಸಹಾಯಕಿಯರಾದ ಕೆ.ಸುನಿತಾ, ಪಿ.ಬಿ.ಗಿರಿಜಾ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು. 
ಜಿಲ್ಲೆ

ತರಕಾರಿ-ಧಾನ್ಯ ಸೇವಿಸಿ

ಶ್ರೀನಾಥ

ಕೂಡ್ಲಿಗಿ; ಗರ್ಭಿಣಿಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ ಸೇವಿಸುವುದು ಅವಶ್ಯ ಎಂದು ಹಿರಿಯ ಆರೋಗ್ಯ ನಿರೀಕ್ಷಕ ಜಗದೀಶ್ ಹೇಳಿದರು.

ಪಟ್ಟಣದ ಆಶ್ರಯ ಕಾಲನಿಯ ಅಂಗನವಾಡಿ ಕೇಂದ್ರದಲ್ಲಿ ತಿಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಪೌಷ್ಟಿಕ ಆಹಾರ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಬಾಯಿ ರುಚಿಗಾಗಿ ಸಿದ್ಧ ಆಹಾರಗಳನ್ನು ಹೆಚ್ಚಾಗಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ಕಳೆದುಕೊಳ್ಳುವುದರ ಜತೆಗೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ನೈಸರ್ಗಿಕವಾಗಿ ಲಭ್ಯವಿರುವ ಹಣ್ಣು, ತರಕಾರಿ, ಧಾನ್ಯಗಳನ್ನು ಬಳಸುವುದರಿಂದ ಅಗತ್ಯವಾದ ಖನಿಜ ಮತ್ತು ಲವಣಾಂಶಗಳನ್ನು ಪಡೆದು ದೈಹಿಕ, ಮಾನಸಿಕ ಬೆಳವಣಿಗೆ ಹೊಂದಲು ಸಾಧ್ಯ ಎಂದರು.

ಕಿರಿಯ ಆರೋಗ್ಯ ಸಹಾಯಕಿ ಪಿ.ಬಿ.ಗಿರಿಜಾ ಮಾತನಾಡಿ, ಸತ್ವಯುತ ಆಹಾರ ಸೇವನೆಯಿಂದ ಜನಿಸುವ ಮಗು ಮತ್ತು ತಾಯಿಯ ಆರೋಗ್ಯ ಸುಸ್ಥಿರವಾಗಿರುತ್ತದೆ. ಈ ಬಗ್ಗೆ ಗರ್ಭಿಣಿಯರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಸಕಾಲದಲ್ಲಿ ಗರ್ಭಿಣಿಯರು ಹಾಗೂ ಮಕ್ಕಳಿಗೆ ಲಸಿಕೆ ಹಾಕಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಪಪಂ ಸದಸ್ಯೆ ಎಂ.ಶಾರದಾ ಬಾಯಿ, ಕಿರಿಯ ಆರೋಗ್ಯ ಸಹಾಯಕಿ ಕೆ.ಸುನಿತಾ, ಆಶಾ ಕಾರ್ಯಕರ್ತೆಯರಾದ ಜ್ಯೋತಿ, ಪದ್ಮಾ, ಉಮಾದೇವಿ, ಎ.ಎಂ.ಸಾವಿತ್ರಿ, ಅಂಗನವಾಡಿ ಕಾರ್ಯಕರ್ತೆ ಎಂ.ಜಯಶ್ರೀ, ಸಹಾಯಕಿ ರೇಣುಕಾ ಇದ್ದರು.