ಕೂಡ್ಲಿಗಿ ತಾಲೂಕಿನ ಮೊರಬಾನಹಳ್ಳಿ ಗ್ರಾಮದಲ್ಲಿ ರದ್ದಾಗಿರುವ ಪಡಿತರ ಫಲಾನುಭವಿಗಳ ಮನೆಗೆ ತೆರಳಿ ಆಹಾರ ಇಲಾಖೆ ಶಿರಸ್ತೇದಾರ ಅಜೀತ್ ಕುಮಾರ್, ಆಹಾರ ನಿರೀಕ್ಷಕಿ ಕಮಾಲ ಗುಡ್ಡಪ್ಪ, ಗ್ರಾಪಂ ಸದಸ್ಯ ಕರಿಯಪ್ಪ ಮಾಹಿತಿ ಸಂಗ್ರಹಿಸಿದರು. 
ಜಿಲ್ಲೆ

ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ

ಕೂಡ್ಲಿಗಿ: ತಾಲೂಕಿನ ಮೊರಬಾನಹಳ್ಳಿ ಗ್ರಾಮದಲ್ಲಿ ರದ್ದಾಗಿರುವ ಪಡಿತರ ಫಲಾನುಭವಿಗಳ ಮನೆಗೆ ಅಧಿಕಾರಿಗಳ ತಂಡ ತೆರಳಿ ಬುಧವಾರ ಮಾಹಿತಿ ಸಂಗ್ರಹಿಸಿತು.

ಈಗಾಗಲೇ 150 ಕ್ಕೂ ಹೆಚ್ಚು ಫಲಾನುಭವಿಗಳಿಂದ ಮಾಹಿತಿ ಪಡೆಯಲಾಗಿದೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಶೀಘ್ರದಲ್ಲೇ ಉಳಿದ ಫಲಾನುಭವಿಗಳ ಮನೆಗಳಿಗೆ ಭೇಟಿ ಮಾಡಿ ಪರಿಶೀಲಿಸಿ ಮಾಡಲಾಗುವುದು. ರದ್ದಾದ ಕಾರ್ಡ್‌ಗಳನ್ನು ಮುಂದುವರೆಸಲಾಗುವುದು ಎಂದು ಆಹಾರ ಇಲಾಖೆ ಶಿರಸ್ತೇದಾರ ಅಜೀತ್ ಕುಮಾರ್ ಮಾಹಿತಿ ನೀಡಿದರು.

ಕೆಳ ದಿನಗಳ ಹಿಂದೆ ವಿವಿಧ ಕಾರಣದಿಂದಾಗಲಿ 1,519 ಬಿಪಿಎಲ್ ಕಾರ್ಡ್‌ಗಳು ರದ್ದಾಗಿರುವುದನ್ನು ವಿರೋಧಿಸಿ ಸಾರ್ವಜನಿಕರು ಪ್ರತಿಭಟಿಸಿದ್ದರು. ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಲೂಕಿನ ವಾಸ್ತವ ಮನವರಿಕೆ. ಅರ್ಹ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗಬಾರದು ಎಂದು ತಿಳಿಸಿದ್ದರು. ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ ಅವರು ಅರ್ಹ ಫಲಾನುಭವಿಗಳ ಕುರಿತು ಮಾಹಿತಿ ಸಂಗ್ರಹಿಸಿ ನೀಡಿ. ಕಾರ್ಡ್‌ಗಳನ್ನು ಮುಂದುವರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಹಾಗಾಗಿ ಅಧಿಕಾರಿಗಳ ಫಲಾನುಭವಿಗಳ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.