ಶಿವಪುರ ಗ್ರಾಮದ ರೈತರ ಹೊಲಕ್ಕೆ ಕೂಡ್ಲಿಗಿ ಸಹಾಯಕ ಕೃಷಿ ನಿರ್ದೇಶಕ ಎಂ.ಟಿ.ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿತು. ತಾಂತ್ರಿಕ ವ್ಯವಸ್ಥಾಪಕ ಎಚ್. ಶ್ರವಣಕುಮಾರ ಹಾಗೂ ರೈತರು ಇದ್ದರು. 
ಜಿಲ್ಲೆ

ಜೋಳಕ್ಕೆ ಲದ್ದಿ ಹುಳುಗಳ ಬಾಧೆ

ನರೇಶ್ ಕುಮಾರ್

ಕೂಡ್ಲಿಗಿ: ತಾಲೂಕಿನಲ್ಲಿ ರೈತರು ಬೆಳೆದ ಮೆಕ್ಕೆಜೋಳ ಹಾಗೂ ಜೋಳಕ್ಕೆ ಲದ್ದಿ ಹುಳುಗಳು ಕಾಟವಿದೆ. ಹೀಗಾಗಿ ಶಿವಪುರ ಮತ್ತು ಬಿ.ಬಿ. ತಾಂಡಾ ಸೇರಿ ವಿವಿಧ ಗ್ರಾಮಗಳ ಹೊಲಗಳಿಗೆ ಶನಿವಾರ ಕೂಡ್ಲಿಗಿ ಕೃಷಿ ಇಲಾಖೆ ಎಡಿ ಎಂ.ಟಿ.ಸುನೀಲ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲಿಸಿ ರೋಗ ನಿಯಂತ್ರಣಕ್ಕೆ ಸಲಹೆ ನೀಡಿತು.

ರೈತರು ಮೆಕ್ಕೆಜೋಳ ಬೆಳೆಯಲ್ಲಿ ರೋಗ ಕಂಡುಬಂದಲ್ಲಿ ಹೊಲದ ಸುತ್ತಲಿನ ಕಳೆಯನ್ನು ಕಿತ್ತು ನಾಶಪಡಿಸಬೇಕು. ಎಕರೆಗೆ 5 ರಂತೆ ಮೋಹಕ ಬಲೆಗಳನ್ನು ಅಳವಡಿಸಬೇಕು. ಹೊಲದ ಸುತ್ತ ಕಂದಕ ಮಾಡಿ ಶೇ.5ರ ಮೆಲಾಥಿಯನ್ ಪುಡಿ ಚೆಲ್ಲಬೇಕು. ಮರಿಹುಳಗಳು ಒಂದು ಅಥವಾ ಎರಡನೇ ಹಂತದಲ್ಲಿ ಇದ್ದರೆ ಇಮಾಮೆಕ್ಟಿನ್ ಬೆಂಜೋಯೇಟ್ ಶೇ.5 ಎಸ್‌ಜಿ, 0.4 ಗ್ರಾಂ ಪ್ರತಿ ಲೀಟರ್‌ಗೆ ಅಥವಾ ಸೈನೋಸ್ಯಾಡ್ 45 ಎಸ್ಸಿ 0.2 ಮಿಲೀ ಪ್ರತಿ ಲೀಟರ್‌ಗೆ ಅಥವಾ ಕೊಲ್ಯಾಂಟಿನಿಲಿಪ್ರೋಲ್ 18.5 ಎಸ್.ಸಿ 0.2 ಮಿಲೀ, ಪ್ರತಿ ಲೀಟರ್ ಅಥವಾ ಸೈನೊಟೋರಾಮ್ 11.7 ಎಸ್‌ಸಿ 0.5 ಮಿಲೀ ಪ್ರತೀ ಲೀಟರ್ ನೀರಿಗೆ ಬೆರೆಸಿ ನಸುಕಿನಲ್ಲಿ ಸಿಂಪರಣೆ ಮಾಡಬೇಕು.

ಗಿಡದ ಸುಳಿಯೊಳಗೆ ದ್ರಾವಣ ಬಿಳುವಂತೆ ಎಚ್ಚರಿಕೆ ವಹಿಸಿ ಸಿಂಪರಣೆ ಮಾಡಿದರೆ ಕೀಟಬಾಧೆ ತಡೆಯಬಹುದು ಎಂದು ಸಲಹೆ ನೀಡಿದರು. ಸಹಾಯಕ ಕೃಷಿ ಅಧಿಕಾರಿ ಗುರುಬಸವರಾಜ ಚಿಲಗೋಡು, ತಾಂತ್ರಿಕ ವ್ಯವಸ್ಥಾಪಕ ಎಚ್.ಶ್ರವಣಕುಮಾರ ಇತರರಿದ್ದರು.