ಕೂಡ್ಲಿಗಿಯ ಜ್ಞಾನಭಾರತಿ ಮಹಾ ವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಥಮ ವಷರ್ದ ಬಿಇಡಿ ವಿಧ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಪಟ್ಟಣದ ಯೋಧ ಕಾಟೇರ್ ರಮೇಶ್ ಅವರನ್ನ ಸನ್ಮಾನಿಸಲಾಯಿತು. 
ಜಿಲ್ಲೆ

ಪರಿಶ್ರಮದಿಂದ ಸವಾಲುಗಳ ನಿವಾರಣೆ; ಜ್ಞಾನಭಾರತಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಕೆ.ಎ.ತಿಪ್ಪೇಸ್ವಾಮಿ ಅನಿಸಿಕೆ

ಕೂಡ್ಲಿಗಿ: ಸತತ ಪರಿಶ್ರಮದಿಂದ ಎಂಥ ಕಠಿಣ ಸವಾಲುಗಳನ್ನೂ ಹಿಮ್ಮೆಟ್ಟಿಸಬಹುದು ಎಂದು ಜ್ಞಾನಭಾರತಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಕೆ.ಎ.ತಿಪ್ಪೇಸ್ವಾಮಿ ಹೇಳಿದರು.

ಪಟ್ಟಣದ ಜ್ಞಾನಭಾರತಿ ವಿದ್ಯಾಲಯದಲ್ಲಿ ಶುಕ್ರವಾರ ಮೊದಲ ವರ್ಷದ ಬಿ.ಇಡಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸದಾ ಜ್ಞಾನದಾಯಿಗಳಾಗಿರಬೇಕು. ಪ್ರತಿಯೊಂದು ವಿಷಯದಲ್ಲೂ ಕುತೂಹಲದಿಂದ ಆಲಿಸಿ, ಅದನ್ನ ಮನನ ಮಾಡಿಕೊಳ್ಳವ ಚಾತುರ್ಯ ವಿದ್ಯಾರ್ಥಿಗಳಿಗೆ ಇರಬೇಕು ಎಂದರು.

ಗುರು ಎಂದರೆ ಕತ್ತಲಿನಿಂದ ಬೆಳಕಿನಡೆಗೆ ತೆಗೆದುಕೊಂಡು ಹೋಗುವವರು. ಆದ್ದರಿಂದ ಪ್ರಶಿಕ್ಷಣಾರ್ಥಿಗಳು ಮೊದಲು ತರಬೇತಿಯಲ್ಲಿ ಮೌಲ್ಯಯುತ ಶಿಕ್ಷಣಕ್ಕೆ ಗಮನಹರಿಸಬೇಕು. ಭವಿಷ್ಯದಲ್ಲಿ ಶಿಕ್ಷಕರಾಗುವ ನೀವು ಮಕ್ಕಳಿಗೆ ಬೋಧನೆಯಲ್ಲಿ ಶಿಸ್ತು, ಸಂಸ್ಕಾರ ಹಾಗೂ ಗುರು, ಹಿರಿಯರಿಗೆ ಗೌರವ ನೀಡುವಂತಹ ಶಿಕ್ಷಣ ಕಲಿಸಿಕೊಡಬೇಕು ಎಂದರು. ಬಿ.ಇಡಿ ಪ್ರಾಚಾರ್ಯ ಆರ್.ಗೋಪಾಲರೆಡ್ಡಿ, ಸಂಸ್ಥೆಯ ಆಡಳಿತಾಧಿಕಾರಿ ಜಿ.ಆರ್.ರಾಜು, ವಿಜ್ಞಾನ ವಿಭಾಗದ ಪ್ರಾಚಾರ್ಯ ಕರಿವೀರನಗೌಡ ಇದ್ದರು. ಮಾಜಿ ಸೈನಿಕ ಕಾಟೇರ್ ರಮೇಶ್, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎಂ.ವೀರೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವೀರೇಶ್ ಅಂಗಡಿ, ಡಾಕ್ಟರೇಟ್ ಪಡೆದ ಉಪನ್ಯಾಸಕ ಕೆ.ಎಂ.ವಿಜಯಕುಮಾರ್‌ರನ್ನು ಸನ್ಮಾನಿಸಲಾಯಿತು.