ಕೂಡ್ಲಿಗಿ: ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರೌಢ ಶಾಲೆಗಳ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಬಾಲಕಿಯರ ವಿಭಾಗದಲ್ಲಿ ಕೂಡ್ಲಿಗಿ ಎ.ಡಿ.ಗುಡ್ಡದ ಆದರ್ಶ ವಿದ್ಯಾಲಯ ತಂಡ ಹಾಗೂ ಬಾಲಕರ ವಿಭಾಗದಲ್ಲಿ ಕೊಟ್ಟೂರಿನ ಗುರುದೇವ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ತಂಡ ಉತ್ತಮ ಪ್ರದರ್ಶನ ತೋರಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.
ಬಾಲಕಿಯರ ವಿಭಾಗದ ಅಂತಿಮ ಪಂದ್ಯದಲ್ಲಿ ಕೊಟ್ಟೂರಿನ ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆಯ ತಂಡವನ್ನು ಕೂಡ್ಲಿಗಿ ಎ.ಡಿ.ಗುಡ್ಡದ ಆದರ್ಶ ವಿದ್ಯಾಲಯದ ತಂಡ ಸೋಲಿಸಿತು.
ಕೊಟ್ಟೂರಿನ ಗುರುದೇವ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ತಂಡವನ್ನು ಸೋಲಿಸಿದ ಗುರುದೇವ ಶಾಲೆಯ ಬಾಲಕರು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮೈದೂರು ಶಶಿಧರ ತಿಳಿಸಿದ್ದಾರೆ.