ಕೂಡ್ಲಿಗಿ ಪಪಂ ಮುಖ್ಯಾಧಿಕಾರಿ ಫಿರೋಜ್‌ಖಾನ್‌ಗೆ ಬುಧವಾರ ಮನವಿ ಸಲ್ಲಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು 10ನೇ ವಾರ್ಡ್‌ಗೆ ಕುಡಿಯುವ ನೀರು ಸಮರ್ಪಕವಾಗಿ ಬಿಡಲು ಒತ್ತಾಯಿಸಿದರು. 
ಜಿಲ್ಲೆ

ಸಮರ್ಪಕ ಕುಡಿಯುವ ನೀರು ಬಿಡಲು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಒತ್ತಾಯ

ಕೂಡ್ಲಿಗಿ: ಪಟ್ಟಣದ 10ನೇ ವಾರ್ಡ್‌ನಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಬಿಡುವಂತೆ ಮತ್ತು ಮಿನಿವಾಟರ್‌ಟ್ಯಾಂಕ್ ಅಳವಡಿಸುವಂತೆ ಒತ್ತಾಯಿಸಿ ಪಪಂ ಮುಖ್ಯಾಧಿಕಾರಿ ಫಿರೋಜ್‌ಖಾನ್‌ಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಬುಧವಾರ ಮನವಿ ಸಲ್ಲಿಸಿತು.

ಈ ವಾರ್ಡ್‌ನಲ್ಲಿ 5 ರಿಂದ 8 ದಿನಕ್ಕೊಮ್ಮೆ ನೀರು ಬರುತ್ತಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗಿದೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ. ಪ್ರತಿ ತಿಂಗಳು ನೀರಿನ ಶುಲ್ಕ ಭರಿಸಿದರೂ, ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಪಪಂ ಸದಸ್ಯರಾದ ಕಾವಲಿ ಶಿವಪ್ಪನಾಯಕ, ಕೆ.ಈಶಪ್ಪ, ಪ್ರಮುಖರಾದ ಮಮತಾ, ಎನ್.ಮಂಜುಳಾ, ಟಿ.ಲೀಲಾವತಿ, ಕೆ.ಮಹಾದೇವಿ, ಟಿ.ರತ್ನಮ್ಮ ಇದ್ದರು.