ಹುಬ್ಬಳ್ಳಿ: ಸನಾತನ ಧರ್ಮದಲ್ಲಿ ಅನೂಚಾನವಾಗಿ ಬಂದ ಸಂಪ್ರದಾಯ ಹಾಗೂ ಪರಂಪರೆಗಳ ಅರ್ಥ ಅರಿತು ಅವುಗಳನ್ನು ಆಚರಿಸಿದಾಗ ಕಾರ್ಯಸಿದ್ಧಿ ಮತ್ತು ಫಲ ಪ್ರಾಪ್ತಿಯಾಗುತ್ತದೆ ಎಂದು ಶ್ರೀ ಕ್ಷೇತ್ರ ಕೂಡಲಿ ಶೃಂಗೇರಿ ಮಹಾ ಸಂಸ್ಥಾನದ ಜಗದ್ಗುರು ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಹೇಳಿದರು.
ನಗರದ ಕೇಶ್ವಾಪುರ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಶುಕ್ರವಾರ ಆಯೋಜಿಸಿದ್ದ ಪಾದಪೂಜೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಸಂಘದ ನೂತನ ಕಟ್ಟಡ ಕಾಮಗಾರಿ ವೀಕ್ಷಿಸಿದ ಜಗದ್ಗುರುಗಳು, ಸಂಘದ ಸಮಾಜ ಶ್ರೇಯೋಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದರು.
ಪೂರ್ಣಕುಂಭ ಸ್ವಾಗತದ ನಂತರ ಸಂಘದ ಅಧ್ಯಕ್ಷ ಕೃಷ್ಣ ಕುಲಕರ್ಣಿ, ಕಾರ್ಯಾಧ್ಯಕ್ಷ ಸುನಿಲ ಗುಮಾಸ್ತೆ ನೇತೃತ್ವದಲ್ಲಿ ಭಕ್ತರು ಪಾದಪೂಜೆ ನೆರವೇರಿಸಿದರು.
ಸಂಘದ ಪದಾಧಿಕಾರಿಗಳಾದ ವಿಲಾಸ ಕೊಣ್ಣೂರ, ಪ್ರಹ್ಲಾದ ಪರ್ವತಿ, ರಾಘವೇಂದ್ರ ಗುಡಿ, ಮನೋಹರ ಪರ್ವತಿ, ವೆಂಕಟೇಶ ದಿವಾಣಜಿ, ಧೀರೇಂದ್ರ ಬಾಗಲಕೋಟೆ, ಮನೋಜ ಪರ್ವತೀಕರ, ಪ್ರದಿಪ ಜೋಶಿ, ಸರಸ್ವತಿ ಗುಡಿ, ಅನೇಕ ಭಕ್ತರು ಪಾಲ್ಗೊಂಡಿದ್ದರು.