ಜಿಲ್ಲೆ

ಶಿವಶರನ ಹಡಪದ ಅಪ್ಪಣ್ಣ ಮಾರ್ಗದಲ್ಲಿ ನಡೆಯೋಣ: ಕೂಡ್ಲಿಗಿ ತಹಸೀಲ್ದಾರ್ ಕೆ.ಜಗದೀಶ್ ಹೇಳಿಕೆ

ಕೂಡ್ಲಿಗಿ: 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಹಡಪದ ಅಪ್ಪಣ್ಣ ಒಬ್ಬರಾಗಿದ್ದರು ಎಂದು ತಹಸೀಲ್ದಾರ್ ಕೆ.ಜಗದೀಶ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಹಡಪದ ಅಪ್ಪಣ್ಣ ಸಮುದಾಯ ಶನಿವಾರ ಏರ್ಪಡಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಸರಳ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತಾನಾಡಿದರು.

ಬಸವಣ್ಣಗೆ ಆಪ್ತರಾಗಿದ್ದ ಅಪ್ಪಣ ಕಾಯಕ ನಿಷ್ಠೆಯಿಂದ ಹೆಸರಾಗಿದ್ದರು. ಕಾಯಕ ನಿಷ್ಠೆಯೇ ಅವರ ಬೆಳವಣಿಗೆಗೆ ಪೂರಕವಾಗಿತ್ತು. ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ಸಾಗಬೇಕಿದೆ. ಸಮುದಾಯವು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಬಿಸಿಎಂ ಹಾಗೂ ಕಾರ್ಮಿಕ ಇಲಾಖೆಯಲ್ಲಿ ನೀಡುವ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದರು. ಸಮುದಾಯದ ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್.ಮರುಳಸಿದ್ದಪ್ಪ ಮಾತಾನಾಡಿ, ಹಡಪದ ಅಪ್ಪಣ್ಣ ಸಮುದಾಯ ಭವನ ನಿರ್ಮಿಸಲು ಭೂಮಿ ನೀಡಬೇಕು ಎಂದು ಕೋರಿದರು.