ಜಿಲ್ಲೆ

ಮನೆಗೆ ಆಗಮಿಸಿ ಏಳುಮಂದಿ ಮುಸುಕುಧಾರಿಗಳ ತಂಡ ದರೋಡೆ

Mangaluru - Nishantha Narayana

ಪುತ್ತೂರು: ಬಡಗನ್ನೂರು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರೊಬ್ಬರ ಮನೆಗೆ ಆಗಮಿಸಿ ಏಳುಮಂದಿ ಮುಸುಕುಧಾರಿಗಳ ತಂಡ ದರೋಡೆ ನಡೆಸಿದ ಬಗ್ಗೆ ಸಂಪ್ಯ ಠಾಣೆಗೆ ದೂರು ನೀಡಿದ್ದಾರೆ.

ಪಡವನ್ನೂರು ಗ್ರಾಮದ ಕುದ್ಕಾಡಿ ನಿವಾಸಿ ಗುರುಪ್ರಸಾದ್ ರೈ ಅವರ ಮನೆಯಿಂದ ಸುಮಾರು 12ಪವನ್ ಚಿನ್ನಾಭರಣ ಹಾಗೂ 30 ಸಾವಿರ ನಗದು ಕಳವು ಮಾಡಿದ್ದಾರೆಂದು ಹೇಳಲಾಗಿದೆ.ತಾಯಿ ಜತೆಗೆ ಇವರು ವಾಸವಾಗಿದ್ದು, ತಡರಾತ್ರಿ ಹಿಂಭಾಗದ ಬಾಗಿಲು ಮುರಿದು ಒಳ ನುಸುಳಿದ ದರೋಡೆಕೋರರು ಮನೆ ಮಂದಿಯ ಕೈಕಾಲು ಕಟ್ಟಿಹಾಕಿ ಕಪಾಪಿನಲ್ಲಿದ್ದ ನಗದು, ತಾಯಿ ದರಿಸಿದ್ದ ಬಂಗಾರವನ್ನು ತಲವಾರು, ಕತ್ತಿ ಹಿಡಿದು ಬೆದರಿಸಿ ತೆಗೆದುಕೊಂಡು ಹೋಗಿದ್ದಾರೆ.

ಪಶ್ಚಿಮ ವಲಯ ಐಜಿಪಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ.