ಕುಶಾಲನಗರ:
ಕೂಡಿಗೆ ಗ್ರಾಮ ಪಂಚಾಯತಿ ಮಾಸಿಕ ಸಭೆ ಅಧ್ಯಕ್ಷ ಕೆ.ಟಿ. ಗಿರೀಶ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಸಭೆಯ ನಡವಳಿಕೆ ಮತ್ತು ಹಿಂದಿನ ಸಭೆಯ ವರದಿಯನ್ನು ಓದಿದ ನಂತರ ಕಳೆದ ಸಭೆಯಲ್ಲಿ ಸದಸ್ಯರು ಚರ್ಚೆ ಮಾಡಿದ ಸವಿಸ್ತಾರವಾದ ವರದಿಯನ್ನು, ಸಮರ್ಪಕವಾಗಿ ವರದಿ ಮಾಡಬೇಕು, ಚರ್ಚೆಗಳ ಅನುಸಾರವಾಗಿ ಕಾರ್ಯೊನ್ಮಖರಾಗಬೇಕು ಎಂದು ಸಭೆಯಲ್ಲಿ ಹಾಜರಿದ್ದ ಸದಸ್ಯರು ತಿಳಿಸಿದರು.
ನಂತರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗವನ್ನು ಇತರರು ಒತ್ತುವರಿ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿಯಮದ ಅಡಿಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಾಗ ಸಂರಕ್ಷಣೆ ಮಾಡುವುದರ ಜತೆಯಲ್ಲಿ ಈಗಾಗಲೇ ಕಣಿವೆಯ ಸಮೀಪದಲ್ಲಿರುವ ಹಳೆಯ ದನದ ದೊಡ್ಡಿಯ ಜಾಗದಲ್ಲಿ ಪಂಚಾಯತಿ ವತಿಯಿಂದ ನೂತನವಾಗಿ ಅಂಗಡಿ ಮಳಿಗೆಗಳ ನಿರ್ಮಾಣಕ್ಕೆ ಸರ್ವ ಸದಸ್ಯರು ಒಪ್ಪಿಗೆ ನೀಡುವ ಮೂಲಕ ತುರ್ತಾಗಿ ಕಾಮಗಾರಿ ಆರಂಭಿಸುವAತೆ ತಿಳಿಸಿದರು.
ಗ್ರಾಮದ ಅಭಿವೃದ್ಧಿಗೆ ಪೂರಕವಾದ ಮತ್ತು 15ನೇ ಹಣಕಾಸಿನ ಕಾಮಗಾರಿಯನ್ನು ಅದ್ಯತೆಯ ಅನುಗುಣವಾಗಿ ಸಂಪೂರ್ಣವಾಗಿ ಪೂರ್ಣಗೊಳಿಸುವ ಬಗ್ಗೆ ಚರ್ಚೆಗಳು ನಡೆದವು.
ಅಧ್ಯಕ್ಷತೆ ವಹಿಸಿದ್ದ ಕೆ.ಟಿ. ಗಿರೀಶ್ ಮಾತಾಡಿ ಮಾಸಿಕ ಸಭೆಯ ತಿರ್ಮಾನದಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ಶುಚಿತ್ವಕ್ಕೆ ಹೆಚ್ಚಿನ ಅದ್ಯತೆ, ಬೀದಿ ದೀಪಗಳ ದುರಸ್ತಿ ಕ್ರಮವನ್ನು ಕೈಗೊಳ್ಳಲಾಗಿದೆ, ಅದರಂತೆಯೇ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಯೋಜನೆಯನ್ನು ಕೈಗೊಳ್ಳಲು ಸದಸ್ಯರ ಸಹಕಾರ ಮುಖ್ಯ. ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರವನ್ನು ತೆರೆಯುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು, ಅಲ್ಲದೆ ಮುಂದಿನ ದಿನಗಳಲ್ಲಿ ಎಲ್ಲಾ ವಾರ್ಡ್ಗಳ ಶುಚಿತ್ವಕ್ಕೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಸಂಬAಧಿಸಿದAತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಮಂಜಳಾ ಸರ್ಕಾರದ ಯೋಜನೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸದಸ್ಯರಾದ ಎಸ್.ಆರ್. ಅರುಣ್ ರಾವ್, ಮಂಗಳ, ಮೋಹಿನಿ, ಅನಂತ, ಕೆ.ಎಸ್. ಶಿವಕುಮಾರ್, ಚಂದ್ರು, ಜಯಶೀಲಾ, ಹೆಚ್.ಎಸ್. ರವಿ, ಲಕ್ಷಿ, ವಾಣಿ, ರತ್ನಮ್ಮ, ಕಾರ್ಯದರ್ಶಿ ಪುನೀತ್ ಇದ್ದರು.