ಜಿಲ್ಲೆ

ವ್ಯಕ್ತಿಯ ಮೇಲೆ ದಾಳಿ - ಗಂಭೀರ ?

Mangaluru - Nishantha Narayana

ಪುತ್ತೂರು: ಅಡ್ಯನಡ್ಕ ಸಮೀಪದ ಕುದ್ದುಪದವು ಎದುರುಕಜೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಾರಕಾಯುಧದಿಂದ ದಾಳಿ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿರುವಾತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಎದುರುಕಜೆ ನಿವಾಸಿ ಅಲಿ ಎಂಬವರ ಮೇಲೆ ದಾಳಿ ನಡೆದು ಗಾಯಗೊಂಡಿದ್ದಾರೆ. ಮಧ್ಯಾಹ್ನದ ಸಮಯ ಕಾರಿ ನಲ್ಲಿ ಆಗಮಿಸಿದ ಐದು ತಂಡದಿಂದ ಮರಕಾಯುಧದಿಂದ ದಾಳಿ ನಡೆದಿದ್ದು, ತೀವ್ರ ತರಹದ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದಾತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾಳಿ ಕಾರಣ ಇನ್ನೂ ತಿಳಿದು ಬಂದಿಲ್ಲ.