ಜಿಲ್ಲೆ

ಸಂಸ್ಕೃತ ಪಾಠಶಾಲೆಗೆ ಕೂಡಲಿ ಶ್ರೀಗಳ ಭೇಟಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಂಕರಾಚಾರ್ಯರು ವೈದಿಕ ಮತ್ತು ಧಾರ್ಮಿಕ ಸುಧಾರಣೆ ಮಾಡುವುದು ಮಾತ್ರವಲ್ಲದೆ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದ ಸುಧಾರಣೆ ಸಹ ಮಾಡಿದ್ದಾರೆ ಎಂದು ಕೂಡಲಿ ಶೃಂಗೇರಿಯ ಶ್ರೀ ಜಗದ್ಗುರು ಅಭಿನವ ಶಂಕರಭಾರತಿ ಸ್ವಾಮೀಜಿ ಹೇಳಿದರು.

ಇಲ್ಲಿನ ಗಾಂಧಿಚೌಕ್​ನಲ್ಲಿನ ಶ್ರೀ ಶಂಕರಾಚಾರ್ಯ ಸಂಸ್ಕೃತ ಪಾಠ ಶಾಲೆಗೆ ಇತ್ತೀಚೆಗೆ ಭೇಟಿ ನೀಡಿ ಗೌರವ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಶಂಕರಾಚಾರ್ಯರ ಆಚರಣೆಯಂತೆ ನಾವೂ ಧಾರ್ಮಿಕ ಸುಧಾರಣೆ ಜತೆಗೆ ಬಡ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದರು.

ನಂತರ ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು. ಪಾಠಶಾಲಾ ವತಿಯಿಂದ ನಾಗೇಶ ಶಾಸ್ತ್ರಿಗಳು ಮತ್ತು ನ್ಯಾಯಚೂಡಾಮಣಿ ರಾಜೇಶ ಶಾಸ್ತ್ರಿಗಳು ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಿದರು.

ವಾಚಸ್ಪತಿ ಶಾಸ್ತ್ರಿಗಳು ಸ್ವಾಗತಿಸಿದರು. ವೇಣಿಮಾಧವ ಶಾಸ್ತ್ರಿಗಳು, ಆರ್​.ಎಸ್​ ಜೋಶಿ, ಶಿವಸ್ವಾಮಿ ಜೋಶಿ, ವಿಶ್ವನಾಥ ಶಾಸ್ತ್ರಿಗಳು, ಶ್ರೀಧರ ಇನಾಮದಾರ, ಎಸ್​. ಕರಗುದರಿ, ರಮೇಶ ನಾಡಗೇರ, ರಮೇಶ ಕುಲಕರ್ಣಿ, ಎಚ್​.ಜಿ. ಕಿತ್ತೂರ, ಸಂಜೀವ ಕುಲಕರ್ಣಿ, ನಂದು ಜೋಶಿ, ಇತರರು ಇದ್ದರು.